ADVERTISEMENT

ಬಂಡವಾಳ ಹೂಡಿಕೆಗೆ ಪೆರು ಆಹ್ವಾನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 20:00 IST
Last Updated 21 ಜುಲೈ 2019, 20:00 IST
ಸಮಾರಂಭದಲ್ಲಿ ಪೆರು ರಾಯಭಾರಿ ಕಾರ್ಲೋಸ್ ಆರ್ ಪೋಲೊ ಮತ್ತು ಪೆರುವಿನ ಕರ್ನಾಟಕ, ಕೇರಳ ಮತ್ತು ಗೋವಾ ರಾಯಭಾರಿ ವಿಕ್ರಂ ವಿಶ್ವನಾಥ್ ಭಾಗವಹಿಸಿದ್ದರು
ಸಮಾರಂಭದಲ್ಲಿ ಪೆರು ರಾಯಭಾರಿ ಕಾರ್ಲೋಸ್ ಆರ್ ಪೋಲೊ ಮತ್ತು ಪೆರುವಿನ ಕರ್ನಾಟಕ, ಕೇರಳ ಮತ್ತು ಗೋವಾ ರಾಯಭಾರಿ ವಿಕ್ರಂ ವಿಶ್ವನಾಥ್ ಭಾಗವಹಿಸಿದ್ದರು   

ಬೆಂಗಳೂರು: ಗಣಿಗಾರಿಕೆ, ಸಾಫ್ಟ್‌ವೇರ್ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ತಮ್ಮ ದೇಶದಲ್ಲಿ ವಿಪುಲ ಅವಕಾಶಗಳು ಇವೆ ಎಂದು ಪೆರು ರಾಯಭಾರಿ ಕಾರ್ಲೋಸ್ ಆರ್ ಪೋಲೊ ತಿಳಿಸಿದ್ದಾರೆ.

ಪೆರು ದಿನಾಚರಣೆಯ ಸಂದರ್ಭದಲ್ಲಿ ಏರ್ಪಡಿಸಿದ್ದ ಜವಳಿ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ‘ಪೆರುವಿನ ಕೈಗಾ
ರಿಕಾ ಕ್ಷೇತ್ರದಲ್ಲಿ ಹೂಡಿಕೆಗೆ ಪೂರಕವಾದ ವಾತಾವರಣವಿದೆ’ ಎಂದರು.

‘ಚೀನಾ ಮತ್ತು ಅಮೆರಿಕದ ನಂತರ ಭಾರತವು ಪೆರುವಿನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಚಿನ್ನ ಮತ್ತಿತರ ಅಮೂಲ್ಯ ಲೋಹಗಳಿಗೆ ಪೆರು ಹೆಸರುವಾಸಿಯಾಗಿದೆ. ಕರ್ನಾಟಕ ಸೇರಿದಂತೆ ಭಾರತದ ಗಣಿಗಾರಿಕೆ ಮತ್ತು ಐ.ಟಿ ವಹಿವಾಟಿನ ಹೂಡಿಕೆದಾರರಿಗೆ ಆತ್ಮೀಯ ಸ್ವಾಗತ ಕೋರುತ್ತದೆ’ ಎಂದೂ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.