ADVERTISEMENT

ಸತತ ಎರಡನೇ ದಿನ ತೈಲ ಬೆಲೆ ಇಳಿಕೆ: ಪೆಟ್ರೋಲ್ 21 ಪೈಸೆ, ಡೀಸೆಲ್ 20 ಪೈಸೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 8:42 IST
Last Updated 25 ಮಾರ್ಚ್ 2021, 8:42 IST
   

ನವದೆಹಲಿ: ಸತತ ಎರಡನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡಿದೆ. ಪೆಟ್ರೋಲ್ ಬೆಲೆಯಲ್ಲಿ21 ಪೈಸೆ, ಡೀಸೆಲ್ 20 ಪೈಸೆ ಇಳಿಕೆಯಾಗಿದೆ.

ಕೋವಿಡ್–19 ಎರಡನೇ ಅಲೆಯ ಪರಿಣಾಮ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಇಳಿಕೆ ಕಂಡಿರುವುದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯೂ ಎರಡು ದಿನಗಳಿಂದ ಇಳಿಯುತ್ತಿದೆ.

ಬೆಲೆ ಇಳಿಕೆಬಳಿಕ ದೆಹಲಿಯಲ್ಲಿ ಈಗ ಒಂದು ಲೀಟರ್ ಪೆಟ್ರೋಲ್‌ ಬೆಲೆ ₹ 90.78 ಮತ್ತು ಡೀಸೆಲ್ ₹ 81.10 ಆಗಿದೆ.

ADVERTISEMENT

ಕಳೆದ ಮಾರ್ಚ್‌ನಲ್ಲಿ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿದ ಬಳಿಕಪೆಟ್ರೋಲ್‌ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹ 21.58 ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ₹ 19.18 ಏರಿಕೆ ಕಂಡಿತ್ತು.

ಕಳೆದ ತಿಂಗಳು ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ₹ 100 ದಾಟುವ ಮೂಲಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.