ADVERTISEMENT

ಬಿಹಾರದಲ್ಲಿ ₹100ರ ಗಡಿ ದಾಟಿದ ಪೆಟ್ರೋಲ್ ದರ

ಪಿಟಿಐ
Published 27 ಜೂನ್ 2021, 8:16 IST
Last Updated 27 ಜೂನ್ 2021, 8:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಭಾನುವಾರ ಮತ್ತೆ ತೈಲ ದರ ಏರಿಕೆಯಾಗಿದ್ದು, ಬಿಹಾರದಲ್ಲಿ ಪೆಟ್ರೋಲ್‌ ಬೆಲೆ ₹100ರ ಗಡಿ ದಾಟಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲೂ ಪೆಟ್ರೋಲ್‌ ದರ ಲೀಟರ್‌ಗೆ 35 ಪೈಸೆ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 25 ಪೈಸೆ ಹೆಚ್ಚಳವಾಗಿದೆ.

ಶನಿವಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯೂ ಲೀಟರ್‌ಗೆ 35 ಪೈಸೆ ಹೆಚ್ಚಿತ್ತು.

ADVERTISEMENT

ರಾಜ್ಯಗಳ ಸ್ಥಳೀಯ ತೆರಿಗೆ ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗುತ್ತದೆ. ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹ 98.46 ಮತ್ತು ಡೀಸೆಲ್‌ ಬೆಲೆ ₹88.90 ಇದೆ. ಈಗಾಗಲೇ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ,ಜಮ್ಮು ಮತ್ತು ಕಾಶ್ಮೀರ, ಒಡಿಶಾ,ತಮಿಳುನಾಡು, ಲಡಾಖ್‌ನಲ್ಲಿ ₹100ರ ಗಡಿಯನ್ನು ದಾಟಿದೆ.

ಇದೀಗ ಪಟ್ನಾದಲ್ಲೂ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹100.47 ಮತ್ತು ಡೀಸೆಲ್‌ ಬೆಲೆ ₹94.24 ಆಗಿದೆ.

ಮೆಟ್ರೋ ನಗರಗಳಾದ ಮುಂಬೈ, ಹೈದರಾಬಾದ್‌, ಬೆಂಗಳೂರಿನಲ್ಲೂ ಪೆಟ್ರೋಲ್‌ ದರ ₹100 ಕ್ಕಿಂತ ಹೆಚ್ಚಿದೆ. ಪ್ರಸ್ತುತ ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ₹104.56 ಮತ್ತು ಡೀಸೆಲ್‌ಗೆ ₹96.42 ಇದೆ.

ದೇಶದಲ್ಲಿ ಮೇ 4 ರಿಂದ ಭಾನುವಾರದವರೆಗೆ 31 ಬಾರಿ ಪೆಟ್ರೋಲ್‌ ಬೆಲೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.