ADVERTISEMENT

ಪೆಟ್ರೋಲ್‌, ಡೀಸೆಲ್‌ ದರ ಅಲ್ಪ ಏರಿಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 19:35 IST
Last Updated 18 ಡಿಸೆಂಬರ್ 2018, 19:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದಲ್ಲಿ ಒಂದು ವಾರದಿಂದ ಪೆಟ್ರೋಲ್‌ ದರ ಮತ್ತೆ ಏರಿಕೆ ಹಾದಿ ಹಿಡಿದಿದೆ.ಡಿಸೆಂಬರ್‌ 13ರಿಂದ ಡಿ. 18ರವರೆಗೆ ಪ್ರತಿ ಲೀಟರ್‌ ಪೆಟ್ರೋಲ್‌ ದರ 34 ಪೈಸೆ ಹೆಚ್ಚಾಗಿದೆ.

ಡೀಸೆಲ್‌ ದರ ಎರಡು ದಿನಗಳಲ್ಲಿ ಅಂದರೆ ಸೋಮವಾರದಿಂದ ಮಂಗಳವಾರದವರೆಗೆ 17 ಪೈಸೆ ಹೆಚ್ಚಾಗಿದೆ.

ಮಂಗಳವಾರ ಚಿಲ್ಲರೆ ಮಾರಾಟ ದರ ಲೀಟರ್ ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಕ್ರಮವಾಗಿ ₹ 71.20 ಮತ್ತು ₹ 64.90 ಇತ್ತು. ಕಚ್ಚಾ ತೈಲ ದರ ತಗ್ಗುತ್ತಿರುವುದರಿಂದ ಇಂಧನ ದರಗಳಲ್ಲಿಯೂ ಇಳಿಕೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.