ನವದೆಹಲಿ: ನಿರಂತರವಾಗಿ ಏರಿಕೆಯಾಗುತ್ತಿರುವ ಇಂಧನ ದರದಲ್ಲಿಗುರುವಾರ ಮತ್ತೆ ಹೆಚ್ಚಳವಾಗಿದ್ದು, ಪೆಟ್ರೋಲ್, ಡೀಸೆಲ್ ಕ್ರಮವಾಗಿ 16 ಪೈಸೆ ಮತ್ತು 14 ಪೈಸೆ ಏರಿಕೆಯಾಗಿದೆ.
ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ಈಗ ₹0.14ರಷ್ಟು ಮತ್ತು ಪೆಟ್ರೋಲ್ ಬೆಲೆ ₹0.16 ರಷ್ಟು ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ₹75.96 ಮತ್ತು ಪೆಟ್ರೋಲ್ ಬೆಲೆ ₹82.35ಕ್ಕೆ ತಲುಪಿದೆ.
ದೆಹಲಿಯಲ್ಲಿ ಡೀಸೆಲ್ ದರ ₹80.02 ಮತ್ತು ಪೆಟ್ರೋಲ್ ದರ ₹79.92ಕ್ಕೆ ಏರಿಕೆಯಾಗಿದೆ. ಇತ್ತ ಮುಂಬೈನಲ್ಲಿ ಡೀಸೆಲ್ ದರ ₹77.76 ಮತ್ತು ಪೆಟ್ರೋಲ್ ದರ ₹86.54 ಹೆಚ್ಚಳವಾಗಿದೆ.
ಈ ತಿಂಗಳ 7ರಿಂದ ಆರಂಭವಾದ ಇಂಧನಗಳ ದಿನನಿತ್ಯದ ಬೆಲೆ ಪರಿಷ್ಕರಣೆಯು ಸತತ 19 ದಿನವೂಮುಂದುವರೆದಿದೆ. ಇದರಿಂದಾಗಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ₹10.63 ಮತ್ತು ಪೆಟ್ರೋಲ್ ₹ 8.21ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ...ಪೆಟ್ರೋಲ್ಗಿಂತ ಡೀಸೆಲ್ ದುಬಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.