ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಸೋಮವಾರ ಇಂಧನ ದರದಲ್ಲಿ ಹೆಚ್ಚಳ ಮಾಡಿವೆ.
ಎಚ್ಪಿಸಿಎಲ್ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 42 ಪೈಸೆಯಷ್ಟು ಹೆಚ್ಚಾಗಿದ್ದು ₹ 109.68ಕ್ಕೆ ಏರಿಕೆ ಆಗಿದೆ. ಡೀಸೆಲ್ ದರ ಲೀಟರಿಗೆ 39 ಪೈಸೆ ಹೆಚ್ಚಾಗಿದ್ದು ₹ 93.21ಕ್ಕೆ ತಲುಪಿದೆ. ಮಾರ್ಚ್ 22ರಿಂದ ಏಪ್ರಿಲ್ 4ರವರೆಗೆ ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಲೀಟರಿಗೆ ₹ 8.75ರಷ್ಟು ಮತ್ತು ಡೀಸೆಲ್ ದರ ₹ 8.2ರಷ್ಟು ಹೆಚ್ಚಳ ಆಗಿದೆ.
ಸ್ಥಳೀಯ ಮಾರಾಟ ತೆರಿಗೆ ಮತ್ತು ಸಾಗಣೆ ವೆಚ್ಚಕ್ಕೆ ಅನುಗುಣವಾಗಿ ಮಾರಾಟ ದರವು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಆಗುತ್ತದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ ₹ 103.81 ಮತ್ತು ಡೀಸೆಲ್ ದರ ಲೀಟರಿಗೆ ₹ 95.07ಕ್ಕೆ ಏರಿಕೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.