ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ

ಪಿಟಿಐ
Published 14 ಮೇ 2021, 14:38 IST
Last Updated 14 ಮೇ 2021, 14:38 IST
   

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶುಕ್ರವಾರ ಏರಿಕೆ ಆಗಿದೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿದೆ.

ಶುಕ್ರವಾರದ ಹೆಚ್ಚಳದಿಂದಾಗಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆಯು ₹ 95.41, ಡೀಸೆಲ್ ಬೆಲೆಯು ₹ 87.94 ಆಗಿದೆ. ಪೆಟ್ರೋಲ್ ಬೆಲೆಯಲ್ಲಿ 30 ಪೈಸೆ, ಡೀಸೆಲ್ ಬೆಲೆ 37 ಪೈಸೆ ಹೆಚ್ಚಳ ಆಗಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆಯು ₹ 92.34ಕ್ಕೆ, ಡೀಸೆಲ್ ಬೆಲೆಯು ₹ 82.95ಕ್ಕೆ ತಲುಪಿದೆ.

ADVERTISEMENT

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಕಡೆಗಳಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆಯು ಈಗಾಗಲೇ ₹ 100ರ ಗಡಿ ದಾಟಿದೆ. ಶುಕ್ರವಾರದ ಹೆಚ್ಚಳದ ಪರಿಣಾಮವಾಗಿ ಮುಂಬೈನಲ್ಲಿ ಪೆಟ್ರೋಲ್ ದರವು ₹ 100ರತ್ತ ಸಮೀಪಿಸಿದೆ. ಈಗ ಮುಂಬೈನಲ್ಲಿ ಪೆಟ್ರೋಲ್ ಬೆಲೆ ₹ 98.65.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.