ADVERTISEMENT

5ನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರ ಬದಲಿಲ್ಲ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 14:08 IST
Last Updated 4 ಜುಲೈ 2020, 14:08 IST
ಪೆಟ್ರೋಲ್
ಪೆಟ್ರೋಲ್   

ಬೆಂಗಳೂರು: ಮೂರು ವಾರಗಳಬಳಿಕ ಇದೀಗ ಇಂಧನ ದರ ಏರಿಕೆಗೆ ತುಸು ಕಡಿವಾಣ ಬಿದ್ದಿದೆ. ಕಳೆದ ಐದು ದಿನಗಳಿಂದ ಪೆಟ್ರೋಲ್‌ ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳುಜೂನ್‌ 7ರಿಂದ 29ರವರೆಗೆ ಇಂಧನ ದರದಲ್ಲಿ ಏರಿಕೆ ಮಾಡಿವೆ. ಡೀಸೆಲ್‌ ದರ ಒಟ್ಟಾರೆ 22 ಬಾರಿ ಮತ್ತು ಪೆಟ್ರೊಲ್‌ ದರ 21 ಬಾರಿ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಸದ್ಯ ಒಂದು ಲೀಟರ್ ಪೆಟ್ರೋಲ್ ದರ ₹ 83.04 ಹಾಗೂ ಡೀಸೆಲ್‌ ದರ ₹ 76.58ರಷ್ಟಿದೆ. ಮುಂಬೈನಲ್ಲಿ ಪೆಟ್ರೋಲ್‌ ₹ 87.19 ಮತ್ತು ಡೀಸೆಲ್‌ ₹ 78.83, ದೆಹಲಿಯಲ್ಲಿ ಪೆಟ್ರೋಲ್ ₹ 80.43 ಮತ್ತು ಡೀಸೆಲ್‌ ₹80.53ರಂತೆ ಮಾರಾಟವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.