ನವದೆಹಲಿ: ದೇಶದಾದ್ಯಂತ ಇಂಧನ ದರಗಳು ಇಳಿಮುಖವಾಗಿವೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು18 ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹4 ಮತ್ತು ಡೀಸೆಲ್ ದರ ₹2.33ರಷ್ಟು ಇಳಿಕೆ ಮಾಡಿವೆ.
ಭಾನುವಾರ ಪ್ರತಿ ಲೀಟರ್ ಪೆಟ್ರೋಲ್ ದರ 21 ಪೈಸೆ ಮತ್ತು ಡೀಸೆಲ್ ದರ 17 ಪೈಸೆ ಇಳಿಕೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ₹79.42 ಮತ್ತು ಡೀಸೆಲ್ ₹73.56ರಂತೆ ಮಾರಾಟವಾಗುತ್ತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಕಾಣುತ್ತಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಧನ ದರಗಳನ್ನು ತಗ್ಗಿಸುತ್ತಿವೆ.
ನಗರ: ಪೆಟ್ರೋಲ್ – ಡೀಸೆಲ್ (ಪ್ರತಿ ಲೀಟರ್ಗೆ)
ಬೆಂಗಳೂರು:₹79.42 – ₹ 73.56
ನವದೆಹಲಿ: ₹78.78 – ₹73.36
ಮುಂಬೈ: ₹82.28 – ₹76.88
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.