ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ತಡೆಯೇ ಇಲ್ಲದಂತಾಗಿದೆ. ಪೆಟ್ರೋಲ್ ಬೆಲೆ ಇಂದು 34 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 30 ಪೈಸೆ ಹೆಚ್ಚಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ದಾಖಲೆಯ ₹104.90ಕ್ಕೆ ಮುಟ್ಟಿದ್ದು, ಡೀಸೆಲ್ ಬೆಲೆ ₹96.72 ಆಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ₹98.81 ಮತ್ತು ಡೀಸೆಲ್ ಬೆಲೆ ₹88.18 ರಷ್ಟಾಗಿದೆ.
ಮುಂಬೈ ಬಳಿಕ ಅತ್ಯಧಿಕ ಪೆಟ್ರೋಲ್ ಬೆಲೆ ದಾಖಲಾಗಿರುವ ಮಹಾನಗರಗಳ ಸಾಲಿನಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹ 102.11 ಆಗಿದ್ದರೆ, ಡೀಸೆಲ್ ದರ ₹ 94.54 ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.