ADVERTISEMENT

ಕಾರ್‌ ಸರ್ವೀಸ್‌ಗೆ ಪಿಟ್‌ಸ್ಟಾಪ್‌ ರಿವೈವ್‌ ಯೋಜನೆ

​ಪ್ರಜಾವಾಣಿ ವಾರ್ತೆ
Published 3 ಮೇ 2020, 19:15 IST
Last Updated 3 ಮೇ 2020, 19:15 IST

ಬೆಂಗಳೂರು: ಕಾರಿಗೆ ಸಂಬಂಧಿಸಿದ ಸೇವೆಗಳನ್ನು ಮನೆಬಾಗಿಲಿಗೆ ಒದಗಿಸುವ ಪಿಟ್‌ಸ್ಟಾಪ್‌ ಕಂಪನಿಯು ಪಿಟ್‌ಸ್ಟಾಪ್‌ ರಿವೈವ್‌ ಎಂಬ ವಿಶೇಷ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದೆ.ಸರ್ವೀಸ್‌ ಪ್ಯಾಕೇಜ್‌ ₹ 1,999 ರಿಂದ ಆರಂಭವಾಗಲಿದೆ. ಕಾರಿನ ಒಳಾಂಗಣ ಮತ್ತು ಹೊರಾಂಗಣವನ್ನು ಸೋಂಕುರಹಿತವಾಗಿ ಸ್ವಚ್ಛಗೊಳಿಸಲು ₹ 699 ನೀಡಬೇಕಾಗುತ್ತದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಕಾರನ್ನು ಚಲಾಯಿಸದೇ ಇಡುವುದರಿಂದ ಆಗುವ ಸಮಸ್ಯೆಗಳನ್ನು ಸಂಪರ್ಕರಹಿತವಾಗಿ (ಕಾಂಟ್ಯಾಕ್ಟ್‌ಲೆಸ್‌) ಪರಿಹರಿಸಲು ಆರು ಪಾಯಿಂಟ್‌ ತಪಾಸಣೆಯನ್ನು ನೀಡಲು ಈ ಯೋಜನೆ ಆರಂಭಿಸಲಾಗಿದೆ. ಬ್ಯಾಟರಿ, ಟಯರ್‌, ಬ್ರೇಕ್, ಫ್ಯೂಯಿಡ್‌ ಮತ್ತು ಆಯಿಲ್‌ ಅಥವಾ ಇನ್ಯಾವುದೇ ರೀತಿಯ ಸೋರಿಕೆಗಳ ತಪಾಸಣೆ ನಡೆಸು ವುದಲ್ಲದೆ ಕಾರಿನ ಹೊರಭಾಗ ಮತ್ತು ಒಳಭಾಗದ ಸ್ವಚ್ಛತೆಯನ್ನೂ ನಿರ್ವಹಿಸಲಾಗುವುದು.

ಸೇವೆಗೆ ಗ್ರಾಹಕರು6262621234ಗೆ ಕರೆ ಮಾಡಿ ಅಥವಾwww.getpitstop.comನಲ್ಲಿ ಲಾಗಿನ್‌ ಆಗಬಹುದು. ಇತರ ನಗರಗಳಿಗೆ ಸದ್ಯದಲ್ಲೇ ವಿಸ್ತರಿಸಲಾಗುವುದು’ ಎಂದು ಪಿಟ್‌ಸ್ಟಾಪ್‌ ಸಿಇಒ ಮಿಹಿರ್‌ ಮೋಹನ್‌ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.