ADVERTISEMENT

ಪಿಎಂಸಿ ಬ್ಯಾಂಕ್‌ ನಿರ್ಬಂಧ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 20:35 IST
Last Updated 21 ಮಾರ್ಚ್ 2020, 20:35 IST

ಮುಂಬೈ (ಪಿಟಿಐ): ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್‌ ಮೇಲಿನ ನಿರ್ಬಂಧವನ್ನು ಜೂನ್‌ 22ರವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶನಿವಾರ ತಿಳಿಸಿದೆ.

ಬ್ಯಾಂಕಿಂಗ್‌ ನಿಯಂತ್ರಣ ಕ್ರಮಗಳನ್ನು ಪಾಲಿಸದೇ ಇರುವ ಕಾರಣಕ್ಕೆ 2019ರ ಸೆಪ್ಟೆಂಬರ್‌ 23ರಿಂದ 2020ರ ಮಾರ್ಚ್‌ 23ರವರೆಗೆ ಬ್ಯಾಂಕ್‌ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಅದನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಣೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾಣಿಜ್ಯ ಬ್ಯಾಂಕ್‌ ಗಳಂತೆ,ಸಹಕಾರಿ ಬ್ಯಾಂಕ್‌ಗಳನ್ನು ಪುನಶ್ಚೇತನಗೊಳಿಸುವ ಅಧಿಕಾರ ಆರ್‌ಬಿಐ ಬಳಿ ಇಲ್ಲ. ಹೀಗಿದ್ದರೂ ಠೇವಣಿದಾರರ ಹಿತರಕ್ಷಣೆ ಮತ್ತು ಸಹಕಾರಿ ಬ್ಯಾಂಕಿಂಗ್‌ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಪಿಎಂಸಿ ಬ್ಯಾಂಕ್‌ ಅನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪಾಲುದಾರರು ಮತ್ತು ಆಡಳಿತ ವರ್ಗಗಳ ಜತೆ ಚರ್ಚಿಸಲಾಗುತ್ತಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.