ADVERTISEMENT

ವಿಲೀನ: ಪಿಎನ್‌ಬಿ ಆಡಳಿತ ಮಂಡಳಿ ಒಪ್ಪಿಗೆ

ಪಿಟಿಐ
Published 5 ಸೆಪ್ಟೆಂಬರ್ 2019, 12:35 IST
Last Updated 5 ಸೆಪ್ಟೆಂಬರ್ 2019, 12:35 IST

ನವದೆಹಲಿ: ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾವನ್ನು ವಿಲೀನಗೊಳಿಸಿಕೊಳ್ಳಲು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ಆಡಳಿತ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ.

ಹಣಕಾಸು ಸಚಿವಾಲಯದ ಸೂಚನೆಯಂತೆ ಗುರುವಾರ ಆಡಳಿತ ಮಂಡಳಿ ಸಭೆಯಲ್ಲಿ ವಿಲೀನದ ಪ್ರಸ್ತಾವಕ್ಕೆ ಒಪ್ಪಗೆ ಪಡೆಯಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರಕ್ಕೆ ಆದ್ಯತಾ ಷೇರುಗಳನ್ನು ವಿತರಿಸುವ ಮೂಲಕ ₹ 18 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

ADVERTISEMENT

ವಿಲೀನ ಪ್ರಕ್ರಿಯೆ ಸುಲಭವಾಗಿ ನಡೆಯುವಂತೆ ಮಾಡಲು ಕೇಂದ್ರ ಸರ್ಕಾರ ಪಿಎನ್‌ಬಿಗೆ ₹ 16 ಸಾವಿರ ಕೋಟಿ ನೀಡುವುದಾಗಿ ಘೋಷಿಸಿದೆ.ವಿಲೀನದ ಕುರಿತು ಷೇರುದಾರರ ಒಪ್ಪಿಗೆ ಪಡೆಯಲು ಅಕ್ಟೋಬರ್‌ 22ರಂದು ಇಜಿಎಂ ನಡೆಸಲಾಗುವುದು ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.