ಬೆಂಗಳೂರು: ಸರ್ಕಾರಿ ಸ್ವಾಮ್ಯದ ಎರಡನೆಯ ಅತಿದೊಡ್ಡ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಈಚೆಗೆ ತನ್ನ 128ನೆಯ ಸಂಸ್ಥಾಪನಾ ದಿನ ಆಚರಿಸಿತು.
ಇದರ ಅಂಗವಾಗಿ, ಬ್ಯಾಂಕ್‌ನ ಬೆಂಗಳೂರು ವೃತ್ತದ ಅಧೀನದ ಶಾಖೆಗಳು ಗ್ರಾಹಕ ಸೇವೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಗೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.
ಹೈದರಾಬಾದ್ ವಲಯದ ವ್ಯವಸ್ಥಾಪಕ ಸಂಜೀವನ್ ನಿಖಾರ್, ಬೆಂಗಳೂರು ಪಶ್ಚಿಮ ವೃತ್ತದ ಮುಖ್ಯಸ್ಥ ಬಸಂತ ಕುಮಾರ್ ಅವರು ಹಿರಿಯ ನಾಗರಿಕರಿಗೆ ವಿದ್ಯುತ್ ಚಾಲಿತ ವಾಹನಗಳನ್ನು ವಿತರಿಸಿದರು. ‘ನೆಲೆ’ ಅನಾಥಾಶ್ರಮಕ್ಕೆ ₹ 25 ಸಾವಿರ ದೇಣಿಗೆ ನೀಡಲಾಯಿತು.
ಬೆಂಗಳೂರು ಪಶ್ಚಿಮ ವೃತ್ತ ಕಚೇರಿಯ ಅಧಿಕಾರಿಗಳಾದ ಜಾನ್ ಅಬ್ರಹಾಂ ಮತ್ತು ಸಂತೋಷ್ ಸಿಂಗ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.