ADVERTISEMENT

ಪಿಎನ್‌ಬಿ: ಹೊಸ ವಲಯ ರಚನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 15:58 IST
Last Updated 10 ಜೂನ್ 2020, 15:58 IST
ಅಶುತೋಷ್‌ ಚೌಧರಿ
ಅಶುತೋಷ್‌ ಚೌಧರಿ   

ಬೆಂಗಳೂರು: ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಗ್ರಾಹಕರ ಹೆಚ್ಚುತ್ತಿರುವ ನಿರೀಕ್ಷೆಗಳನ್ನು ಈಡೇರಿಸಲು ಹೊಸ ವಲಯ ರಚಿಸಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಂಡ ಹೊಸ ವಲಯವನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಮೂರೂ ರಾಜ್ಯಗಳ ಅಗತ್ಯ ಒದಗಿಸುವ ವಲಯ ಪ್ರಧಾನ ಕಚೇರಿಯು ಹೈದರಾಬಾದ್‌ನಲ್ಲಿ ಇರಲಿದೆ. ಅಶುತೋಷ್‌ ಚೌಧರಿ ಅವರು ವಲಯದ ಮ್ಯಾನೇಜರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿಲೀನದ ನಂತರ ‘ಪಿಎನ್‌ಬಿ’ಯ ಒಟ್ಟಾರೆ ವಹಿವಾಟು ₹ 18 ಲಕ್ಷ ಕೋಟಿಗೆ ತಲುಪಿದೆ. ದೇಶದಾದ್ಯಂತ ಇರುವ ಶಾಖೆಗಳ ಸಂಖ್ಯೆ 12 ಸಾವಿರದಷ್ಟಿದೆ. ಹೊಸ ವಲಯದ ವ್ಯಾಪ್ತಿಯಲ್ಲಿ ಇರುವ 440 ಶಾಖೆಗಳ ಮೂಲಕ ರಿಟೇಲ್‌, ಎಂಎಸ್‌ಎಂಇ ಮತ್ತು ಕಾರ್ಪೊರೇಟ್‌ ವಲಯದ ಸಾಲದ ಅಗತ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.