ADVERTISEMENT

ತಾಯಿ ಹೆಸರಿನಲ್ಲಿ ಅಂಚೆ ಕಚೇರಿ Senior citizen Scheme ನಲ್ಲಿ ಹಣ ಇಡಬಹುದೇ?

ವಾಣಿಜ್ಯ

ಯು.ಪಿ.ಪುರಾಣಿಕ್
Published 25 ಡಿಸೆಂಬರ್ 2018, 19:30 IST
Last Updated 25 ಡಿಸೆಂಬರ್ 2018, 19:30 IST
purnik
purnik   

ಹೆಸರು–ಊರು ಬೇಡ

ನನ್ನ ಬಳಿ ₹ 15 ಲಕ್ಷ ಹಣವಿದೆ. ಅದನ್ನು ತಾಯಿ ಹೆಸರಿನಲ್ಲಿ ಅಂಚೆ ಕಚೇರಿ Senior citizen Scheme ನಲ್ಲಿ ಇಡಬಹುದಾ? ಅದಕ್ಕೆ ತೆರಿಗೆ ಕಟ್ಟಬೇಕೆ?

ಉತ್ತರ: ಗಂಡನ ಆದಾಯವನ್ನು ಹೆಂಡತಿ ಹೆಸರಿನಲ್ಲಿ ಠೇವಣಿ ಇರಿಸಿದಾಗ ಮಾತ್ರ ಅಂತಹ ಆದಾಯವನ್ನು ಗಂಡನ ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ. ರಕ್ತ ಸಂಬಂಧಿಗಳೊಳಗೆ ಯಾರು ಬೇಕಾದರೂ ಹಣ ವರ್ಗಾವಣೆ ಮಾಡಬಹುದು. ಈ ರೀತಿ ಮಾಡಿದಲ್ಲಿ ‘Gift, Capital Gain, income Tax ಮೂರೂ ಬರುವುದಿಲ್ಲ. ನೀವು ತಾಯಿಯ ಹೆಸರಿನಲ್ಲಿ ಅಂಚೆಕಚೇರಿSenior citizen Scheme ನಲ್ಲಿ ಧೈರ್ಯವಾಗಿ ₹ 15 ಲಕ್ಷ ತೊಡಗಿಸಿ. ತಾಯಿ ಅಂಚೆಕಚೇರಿಗೆ 15H ನಮೂನೆ ಫಾರಂ ಸಲ್ಲಿಸಿದ್ದಲ್ಲಿ ಅಲ್ಲಿ ಬರುವ ತೆರಿಗೆಗೂ ಸಂಪೂರ್ಣ ವಿನಾಯ್ತಿ ಇದೆ.

ADVERTISEMENT

1.10.2018 ರಿಂದ ಅಂಚೆ ಕಚೇರಿ ಠೇವಣಿಗಳ ಬಡ್ಡಿ ಹೆಚ್ಚಾಗಿದ್ದು, ಸದ್ಯSenior citizen Scheme ನಲ್ಲಿ ಶೇ 8.7 ಬಡ್ಡಿ ಬರುತ್ತದೆ. ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದು. ಬಡ್ಡಿ ಬೇಡವಾದಲ್ಲಿ ಅಲ್ಲಿಯೇ 5 ವರ್ಷಗಳ ಆರ್.ಡಿ. ಮಾಡಿ. ನಿಮ್ಮ ಹೆಸರಿಗೆ ನಾಮ ನಿರ್ದೇಶನ ಠೇವಣಿಗೆ ತಪ್ಪದೇ ಮಾಡಿಸಿ.

**

ವಿನಯ್.ಸಿ

ನಿಮ್ಮ ಅಂಕಣ ತಪ್ಪದೇ ಓದುತ್ತೇನೆ. ಎಲ್ಲರಿಗೂ ತಿಳಿಯುವಂತೆ ತುಂಬಾ ಸರಳವಾಗಿ ಅರ್ಥಗರ್ಭಿತವಾಗಿ ಉತ್ತರಿಸುತ್ತೀರಿ. ನಿಮಗೆ ಅಭಿನಂದನೆಗಳು. ನನ್ನ ಪ್ರಶ್ನೆ: ಗಂಡ, ಹೆಂಡತಿ ಹೆಸರಿನಲ್ಲಿ RD ಅಥವಾ ಇನ್ನಿತರ ಠೇವಣಿ ಇರಿಸಿದಾಗ, ಹೆಂಡತಿಗೆ ಬೇರಾವ ಆದಾಯ ಇಲ್ಲದಿರುವಾಗ ಅಲ್ಲಿ ಬರುವ ಲಾಭ ಗಂಡನ ಆದಾಯಕ್ಕೆ ಸೇರಿಸ ಬೇಕಾಗುತ್ತದೆ ಎಂಬುದಾಗಿ ತಿಳಿಸಿದ್ದೀರಿ. ನಾನು ಹೀಗೆ ತಿಳಿದಿರುವುದು ಸರಿಯೇ. ತೆರಿಗೆ ಉಳಿಸಲು ಬೇರೆ ಮಾರ್ಗಗಳಿವೆಯೇ?

ಉತ್ತರ: ನೀವು ನನ್ನ ಉತ್ತರ ಸರಿಯಾಗಿ ಅರ್ಥಮಾಡಿಕೊಂಡಿದ್ದೀರಿ. ತೆರಿಗೆ ಉಳಿಸಲು, ಬಹಳಷ್ಟು ಜನರು, ಹೆಂಡತಿ ಹೆಸರಿನಲ್ಲಿ ಠೇವಣಿ ಇರಿಸುತ್ತಾರೆ. ಈ ವಿಧಾನಕ್ಕೆ ಆದಾಯ ತೆರಿಗೆ ನಿಯಮಗಳಡಿ ಅವಕಾಶ ಇರುವುದಿಲ್ಲ. ಇದೇ ವೇಳೆ ಪ್ರಾಪ್ತ ವಯಸ್ಕ ಮಕ್ಕಳು ಇರುವಲ್ಲಿ ಈ ಸಮಸ್ಯೆಯೇ ಬರುವುದಿಲ್ಲ.

ಒಂದು ವೇಳೆ ಮಕ್ಕಳು ಅಪ್ರಾಪ್ತ ವಯಸ್ಕರಾದರೂ, ತಂದೆಯ ಆದಾಯಕ್ಕೇ ಆದಾಯ ಸೇರಿಸಬೇಕಾಗುತ್ತದೆ. ತಂದೆತಾಯಿ ಹೆಸರಿನಲ್ಲಿಯೂ ಇರಿಸಿದರೂ ತೆರಿಗೆ ಬರುವುದಿಲ್ಲ. ಹಣ ರಕ್ತ ಸಂಬಂಧಿಗಳಿಗೆ ವರ್ಗಾಯಿಸಿದಾಗ ಅದನ್ನು ದಾನ (Gift) ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.