ADVERTISEMENT

ಪ್ರೆಸ್ಟೀಜ್‌ ಗ್ರೂಪ್‌ಗೆ ₹ 67 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 18:23 IST
Last Updated 13 ಫೆಬ್ರುವರಿ 2019, 18:23 IST

ಬೆಂಗಳೂರು: ರಿಯಲ್‌ ಎಸ್ಟೇಟ್‌ ಸಂಸ್ಥೆ ಪ್ರೆಸ್ಟೀಜ್‌ ಗ್ರೂಪ್‌, ಪ್ರಸಕ್ತ ಹಣಕಾಸು ವರ್ಷದ ಮೂರನೆ ತ್ರೈಮಾಸಿಕದಲ್ಲಿ
₹ 67.40 ಕೋಟಿ ನಿವ್ವಳ ಲಾಭ ಗಳಿಸಿದೆ.

ಸಂಸ್ಥೆಯ ಒಟ್ಟಾರೆ ವರಮಾನ ₹ 1,103 ಕೋಟಿಗಳಷ್ಟಾಗಿದೆ. ಒಂಬತ್ತು ತಿಂಗಳಲ್ಲಿನ ವರಮಾನವು ₹ 3,358 ಕೋಟಿಗಳಷ್ಟಾಗಿದೆ.

‘ಈ ಹಣಕಾಸು ವರ್ಷದಲ್ಲಿನ ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಂಡಿದೆ. 9 ವಸತಿ, 5 ಕಚೇರಿ ಮತ್ತು 3 ರಿಟೇಲ್‌ ಯೋಜನೆಗಳಲ್ಲಿ 2.40 ಕೋಟಿ ಚದರ ಅಡಿ ಅಭಿವೃದ್ಧಿಪಡಿಸಲಾಗಿದೆ.

ADVERTISEMENT

ಎಲ್ಲ ಭಾಗಿದಾರರ ನೆರವಿನಿಂದ ಈ ಮೈಲುಗಲ್ಲು ತಲುಪಲು ಸಾಧ್ಯವಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್‌ ರಜಾಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.