ADVERTISEMENT

ಮುಂದಿನ ತಿಂಗಳಿನಿಂದ ಟಿವಿ ಬೆಲೆ ಏರಿಕೆ

ಪಿಟಿಐ
Published 25 ನವೆಂಬರ್ 2018, 20:00 IST
Last Updated 25 ನವೆಂಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಟಿವಿ ಮತ್ತು ಗೃಹೋಪಯೋಗಿ ಸಲಕರಣೆ ತಯಾರಿಕಾ ಸಂಸ್ಥೆಗಳು ಮುಂದಿನ ತಿಂಗಳಿನಿಂದ ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿವೆ.

ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ವಿನಿಮಯ ದರದ ಕುಸಿತ ಮತ್ತು ಕಸ್ಟಮ್ಸ್‌ ಸುಂಕ ಹೆಚ್ಚಳದಿಂದ ಕಚ್ಚಾ ಸರಕು ದುಬಾರಿಯಾಗಿತ್ತು.

ಹಬ್ಬದ ದಿನಗಳ ಮಾರಾಟ ಸಂದರ್ಭದಲ್ಲಿ ತಯಾರಕರು ತಾತ್ಕಾಲಿಕವಾಗಿ ಈ ಹೆಚ್ಚುವರಿ ವೆಚ್ಚ ಭರಿಸಿದ್ದರು. ಹಬ್ಬದ ದಿನಗಳ ಮಾರಾಟ ಕೊನೆಗೊಂಡಿರುವುದರಿಂದ ಮಾರಾಟ ಬೆಲೆ ಪರಿಷ್ಕರಿಸಲು ತೀರ್ಮಾನಿಸಿವೆ.

ADVERTISEMENT

ಪ್ಯಾನಾಸಾನಿಕ್ ಇಂಡಿಯಾ ಕಂಪನಿ ತನ್ನ ಉತ್ಪನ್ನಗಳ ಬೆಲೆಯನ್ನು ಶೇ 7ರಷ್ಟು ಹೆಚ್ಚಿಸುವುದಾಗಿ ತಿಳಿಸಿದೆ. ಹಾಯರ್‌, ಗೊದ್ರೇಜ್‌ ಅಪ್ಲೈಯನ್ಸಸ್‌ ಕೂಡ ಇದೇ ಹಾದಿಯಲ್ಲಿ ಸಾಗುವುದಾಗಿ ತಿಳಿಸಿವೆ.

ಬೆಲೆ ಪರಿಷ್ಕರಣೆಯ ಯಾವುದೇ ಆಲೋಚನೆ ಇಲ್ಲ ಎಂದು ಸೋನಿ ಇಂಡಿಯಾ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ವಾಷಿಂಗ್‌ ಮಷಿನ್‌ ಹೊರತುಪಡಿಸಿ, ಗೃಹೋಪಯೋಗಿ ಸಲಕರಣೆ ಮತ್ತು ಎಲೆಕ್ಟ್ರಾನಿಕ್ಸ್‌ ವಲಯಗಳ ವಹಿವಾಟು ಏರಿಕೆ ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.