ನವದೆಹಲಿ: ಇಫ್ಕೊ ಸೇರಿ ಐದು ಖಾಸಗಿ ಕಂಪನಿಗಳು ದೇಶದಲ್ಲಿ ನ್ಯಾನೊ ರಸಗೊಬ್ಬರ ತಯಾರಿಕೆಗೆ ಕಳೆದ ಐದು ವರ್ಷಗಳಲ್ಲಿ ₹300.15 ಕೋಟಿ ಬಂಡವಾಳ ಹೂಡಿಕೆ ಮಾಡಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
‘ದೇಶದಲ್ಲಿ ನ್ಯಾನೊ ರಸಗೊಬ್ಬರ ತಯಾರಿಕೆ ಘಟಕಗಳ ನಿರ್ಮಾಣದಲ್ಲಿ ಸರ್ಕಾರವು ನೇರವಾಗಿ ಭಾಗಿಯಾಗಿಲ್ಲ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು, ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಇಫ್ಕೊ, ಕೋರಮಂಡಲ್ ಇಂಟರ್‌ನ್ಯಾಷನಲ್, ಮೇಘಮಣಿ ಕಂಪನಿ, ಪ್ಯಾರದೀಪ್ ಫಾಸ್ಫೇಟ್ಸ್ ಮತ್ತು ರಾಯ್ ನ್ಯಾನೊ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರವು ಈ ಗೊಬ್ಬರ ಉತ್ಪಾದನೆ ಮತ್ತು ಪ್ರಚಾರದಲ್ಲಿ ತೊಡಗಿವೆ ಎಂದು ತಿಳಿಸಿದ್ದಾರೆ.
ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಈ ರಸಗೊಬ್ಬರ ತಯಾರಿಸುವ ಯಾವುದೇ ಪ್ರಸ್ತಾವ ಸರ್ಕಾರ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2023–24ರಲ್ಲಿ ಕಂಪನಿಗಳು ಸ್ವಸಹಾಯ ಸಂಘದ ಸದಸ್ಯೆಯರಿಗೆ ನ್ಯಾನೊ ರಸಗೊಬ್ಬರ ಸಿಂಪಡಣೆಗಾಗಿ 1,094 ಡ್ರೋನ್‌ಗಳನ್ನು ವಿತರಿಸಿವೆ. ನ್ಯಾನೊ ಯೂರಿಯಾ ಮತ್ತು ನ್ಯಾನೊ ಡಿಎಪಿ ಬೆಲೆಯನ್ನು ಕಂಪನಿಗಳೇ ನಿಗದಿಪಡಿಸುತ್ತವೆ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.