ADVERTISEMENT

26 ಬ್ಯಾಂಕ್‌ಗಳ 3,427 ಶಾಖೆಗಳ ವಿಲೀನ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 17:24 IST
Last Updated 3 ನವೆಂಬರ್ 2019, 17:24 IST

ಇಂದೋರ್ : ಐದು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ 26 ಬ್ಯಾಂಕ್‌ಗಳ 3,427 ಶಾಖೆಗಳನ್ನು ಮುಚ್ಚಲಾಗಿದೆ ಅಥವಾ ವಿಲೀನಗೊಳಿಸಲಾಗಿದೆ.

ಇವುಗಳಲ್ಲಿ 2,568 (ಶೇ 75 ರಷ್ಟು) ಶಾಖೆಗಳು ಎಸ್‌ಬಿಐಗೆ ಸೇರಿದ್ದಾಗಿವೆ.

ಬ್ಯಾಂಕ್‌ಗಳ ವಿಲೀನ ನಿರ್ಧಾರದಿಂದ ಹೀಗಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಲ್ಲಿಸಿದ್ದ ಅರ್ಜಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಹಿತಿನೀಡಿದೆ.

ADVERTISEMENT

ಮಧ್ಯಪ್ರದೇಶದ ನೀಮುಚ್ ನಗರದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌಡ್ ಅವರು ಆರ್‌ಬಿಐ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.