ADVERTISEMENT

ಇ.ವಿ ಬಳಕೆ ಹೆಚ್ಚಲು ಚಾರ್ಜಿಂಗ್ ಕೇಂದ್ರ ಅಗತ್ಯ: ಪಾರ್ಥೊ ಬ್ಯಾನರ್ಜಿ

ಪಿಟಿಐ
Published 10 ಆಗಸ್ಟ್ 2025, 13:47 IST
Last Updated 10 ಆಗಸ್ಟ್ 2025, 13:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳ ಬಳಕೆ ತ್ವರಿತಗತಿಯಲ್ಲಿ ಹೆಚ್ಚಳ ಕಾಣುವಲ್ಲಿ ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಯು ಪ್ರಮುಖ ಪಾತ್ರ ವಹಿಸಲಿದೆ, ಇವುಗಳ ಸಂಖ್ಯೆ ಹೆಚ್ಚಬೇಕಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ (ಮಾರುಕಟ್ಟೆ ಮತ್ತು ಮಾರಾಟ) ಪಾರ್ಥೊ ಬ್ಯಾನರ್ಜಿ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಂಪನಿಯು ತನ್ನ ಮೊದಲ ವಿದ್ಯುತ್‌ ಚಾಲಿತ ವಾಹನ ಇ–ವಿಟಾರಾ ಬಿಡುಗಡೆ ಮಾಡಲಿದೆ. ಗ್ರಾಹಕರು ವಿದ್ಯುತ್‌ ಚಾಲಿತ ವಾಹನಗಳನ್ನು (ಇ.ವಿ) ಕುಟುಂಬದ ಪ್ರಾಥಮಿಕ ಕಾರು ಎಂದು ಪರಿಗಣಿಸದ ಕಾರಣಕ್ಕೆ ಈ ವಿಭಾಗವು ಸಾಕಷ್ಟು ಬೆಳವಣಿಗೆ ಕಾಣುತ್ತಿಲ್ಲ. ಒಂದು ಕಾರನ್ನು ಹೊಂದಲು ಬಯಸುವ ವ್ಯಕ್ತಿ ತನ್ನ ಮೊದಲ ಕಾರು ವಿದ್ಯುತ್‌ಚಾಲಿತ ವಾಹನವಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ, ವಾಹನ ತಯಾರಿಕಾ ಕಂಪನಿಗಳು 500 ಕಿ.ಮೀ ರೇಂಜ್ ನೀಡುವ ಕಾರುಗಳನ್ನು ತಯಾರಿಸಬೇಕಿದೆ. ಜೊತೆಗೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಬೇಕಿದೆ. ಮಾರುತಿ ಸುಜುಕಿಯು 100 ನಗರಗಳಲ್ಲಿ ಜಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿದೆ. ಆದರೆ, ಹೆದ್ದಾರಿಗಳಲ್ಲಿ ಜಾರ್ಜಿಂಗ್‌ ಕೇಂದ್ರಗಳ ಕೊರತೆಯಿದೆ ಎಂದು ಹೇಳಿದ್ದಾರೆ.

ADVERTISEMENT

‘₹2999ಕ್ಕೆ ಆಲ್ಟೋ ಕಾರು’

ಹೊಸ ನಿಯಮಗಳಿಂದ ಕಾರುಗಳ ವೆಚ್ಚ ಹೆಚ್ಚುತ್ತಿದೆ ಇದು ಮಾರಾಟದ ಇಳಿಕೆಗೆ ಕಾರಣವಾಗಿದೆ. ಹೀಗಾಗಿ ಕಂಪನಿಯು ಹಣಕಾಸಿನ ನೆರವು ನೀಡಲಿದೆ. ಶೀಘ್ರದಲ್ಲೇ ₹2999 ನೀಡಿ ಆಲ್ಟೊ ಕಾರನ್ನು ಖರೀದಿಸುವ ಪ್ಯಾಕೇಜ್‌ ಪರಿಚಯಿಸಲಾಗುವುದು ಎಂದು ಬ್ಯಾನರ್ಜಿ ಹೇಳಿದ್ದಾರೆ.‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.