ADVERTISEMENT

ಬಂಡವಾಳ ಸಂಗ್ರಹ: ಪಂಜಾಬ್‌–ಸಿಂದ್‌ ಬ್ಯಾಂಕ್‌ ಮಂಡಳಿ ಒಪ್ಪಿಗೆ

ಪಿಟಿಐ
Published 30 ಜೂನ್ 2024, 13:57 IST
Last Updated 30 ಜೂನ್ 2024, 13:57 IST
,,,,,,
,,,,,,   

ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್‌ ಆ್ಯಂಡ್‌ ಸಿಂಧ್ ಬ್ಯಾಂಕ್‌ ಅರ್ಹ ಸಾಂಸ್ಥಿಕ ಹೂಡಿಕೆ (ಕ್ಯೂಐಪಿ) ಮೂಲಕ ₹2,000 ಕೋಟಿ ಸಂಗ್ರಹಕ್ಕೆ ಮುಂದಾಗಿದೆ. 

‘ಈಗಾಗಲೇ, ಬಂಡವಾಳ ಸಂಗ್ರಹಿಸಲು ಆಡಳಿತ ಮಂಡಳಿಯು ಒಪ್ಪಿಗೆ ನೀಡಿದೆ. ಮಾರುಕಟ್ಟೆಯ ಸ್ಥಿತಿಗತಿ ಆಧರಿಸಿ ಎರಡನೇ ಅಥವಾ ಮೂರನೇ ತ್ರೈಮಾಸಿಕದೊಳಗೆ ಈ ಮೊತ್ತವನ್ನು ಸಂಗ್ರಹಿಸಲಾಗುವುದು’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸ್ವರೂಪ್‌ ಕುಮಾರ್‌ ಸಹಾ ತಿಳಿಸಿದ್ದಾರೆ.

ಈ ಮೊತ್ತವು ಬ್ಯಾಂಕ್‌ ಅನಿರೀಕ್ಷಿತ ನಷ್ಟಕ್ಕೆ ತುತ್ತಾದಾಗ ಎದುರಿಸಲು ಹೊಂದಿರುವ ಸಮರ್ಪಕ ಬಂಡವಾಳ ಅನುಪಾತಕ್ಕೆ (ಸಿಎಆರ್‌) ನೆರವಾಗಲಿದೆ. ಮಾರ್ಚ್‌ ಅಂತ್ಯಕ್ಕೆ ಬ್ಯಾಂಕ್‌ನ ಸಿಎಆರ್‌ ಪ್ರಮಾಣವು ಶೇ 17.10ರಷ್ಟಿದೆ ಎಂದು ತಿಳಿಸಿದ್ದಾರೆ. 

ADVERTISEMENT

ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕ್‌ನ ಸಾಲ ನೀಡಿಕೆಯು ಶೇ 12ರಿಂದ 14ರಷ್ಟು ಏರಿಕೆಯಾಗಲಿದೆ. ರಿಟೇಲ್‌, ಕೃಷಿ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಸಾಲ ನೀಡಿಕೆಯಲ್ಲಿ ಶೇ 15ರಿಂದ ಶೇ 18ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಪಂಜಾಬ್‌ ಆ್ಯಂಡ್‌ ಸಿಂಧ್ ಬ್ಯಾಂಕ್‌ನ ಶೇ 98.25ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.