ADVERTISEMENT

ಐಪಿಒ: ಕಂಪನಿಗಳಿಂದ ₹25 ಸಾವಿರ ಕೋಟಿ ಸಂಗ್ರಹ

ಪಿಟಿಐ
Published 29 ನವೆಂಬರ್ 2020, 14:27 IST
Last Updated 29 ನವೆಂಬರ್ 2020, 14:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಕಂಪನಿಗಳು ಈ ವರ್ಷದಲ್ಲಿ ಇದುವರೆಗೆ ಸಾರ್ವಜನಿಕರಿಗೆ ಷೇರುಗಳ ಆರಂಭಿಕ ಮಾರಾಟದ (ಐಪಿಒ) ಮೂಲಕ ₹ 25 ಸಾವಿರ ಕೋಟಿ ಸಂಗ್ರಹಿಸಿವೆ. ಇದು 2019ರಲ್ಲಿ ಸಂಗ್ರಹವಾಗಿದ್ದ ಮೊತ್ತಕ್ಕಿಂತಲೂ ಹೆಚ್ಚಿನದು.

ಔಷಧ, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ (ಐ.ಟಿ) ಹಾಗೂ ಹಣಕಾಸು ಸೇವೆಗಳ ವಲಯಗಳು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಿವೆ. ಬರ್ಜರ್‌ ಕಿಂಗ್ಸ್‌ನ ₹ 810 ಕೋಟಿ ಮೊತ್ತದ ಐಪಿಒ ಡಿಸೆಂಬರ್‌ನಲ್ಲಿ ಖರೀದಿಗೆ ಮುಕ್ತವಾಗಲಿದೆ.

ಎಸ್‌ಬಿಐ ಕಾರ್ಡ್‌ ಆ್ಯಂಡ್‌ ಪೇಮೆಂಟ್ಸ್‌ ಸರ್ವೀಸಸ್‌ ಲಿಮಿಟೆಡ್‌ ₹ 10,355 ಕೋಟಿ, ಗ್ಲ್ಯಾಂಡ್‌ ಫಾರ್ಮಾ ₹ 6,480 ಕೋಟಿ, ಸಿಎಎಂಎಸ್‌ ₹ 2,240 ಕೋಟಿ ಹಾಗೂ ಯುಟಿಐ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ₹ 2,160 ಕೋಟಿ ಸಂಗ್ರಹಿಸಿವೆ.

ADVERTISEMENT

ರೋಸರಿ ಬಯೋಟೆಕ್‌, ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌, ರೂಟ್‌ ಮೊಬೈಲ್‌, ಕೇಮ್ಕನ್‌ ಸ್ಪೆಷಾಲಿಟಿ ಕೆಮಿಕಲ್ಸ್‌, ಏಂಜಲ್‌ ಬ್ರೋಕಿಂಗ್‌, ಈಕ್ವಿಟಾಸ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, ಲಿಖಿತಾ ಇನ್‌ಫ್ರಾಸ್ಟ್ರಕ್ಷರ್‌, ಮಜ್ಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಕಂಪನಿಗಳು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಿವೆ.

2021ರಲ್ಲಿ ಕಂಪನಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಬಂಡವಾಳ ಸಂಗ್ರಹ (ಕೋಟಿಗಳಲ್ಲಿ)

2020 ನವೆಂಬರ್‌; ₹ 25,000

2019; ₹12,362

2018; ₹30,959

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.