ನವದೆಹಲಿ: ದೇಶದಾದ್ಯಂತ 500 ನಗರಗಳಲ್ಲಿ ರ‍್ಯಾಪಿಡೊ ಸೇವೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ರ‍್ಯಾಪಿಡೊ ಕಂಪನಿಯ ಸಹ ಸಂಸ್ಥಾಪಕ ಪವನ್ ಗುಂಟುಪಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಮೊಬಿಲಿಟಿ ಸೇವೆಯ ವಿಸ್ತಾರ ಹೆಚ್ಚಿದೆ. ಸೇವೆ ವಿಸ್ತರಣೆಯಿಂದ ಕಂಪನಿಯು ಹೆಚ್ಚಿನ ಲಾಭ ಗಳಿಸಲಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಕಂಪನಿಯ ಬೆಳವಣಿಗೆ ಉತ್ತಮವಾಗಿದೆ. ಬಂಡವಾಳವೂ ಸದೃಢವಾಗಿದೆ. ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಕ್ಕೆ ನಿರ್ಧರಿಸಿದೆ. ಐಪಿಒ ಪ್ರಕ್ರಿಯೆ ಆರಂಭಿಸುವ ದಿನಗಳು ದೂರವಿಲ್ಲ ಎಂದು ಹೇಳಿದ್ದಾರೆ.
ಪ್ರತಿ ದಿನ ಆ್ಯಪ್ ಆಧರಿತ ಆಟೊ, ಬೈಕ್ ಟ್ಯಾಕ್ಸಿ ಮತ್ತು ಕ್ಯಾಬ್‌ಗಳ ಮೂಲಕ 33 ಲಕ್ಷ ರೈಡ್ ಸೇವೆ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ, ಕಂಪನಿಯು ಆ್ಯಪ್ ಆಧರಿತ ದ್ವಿಚಕ್ರ ಮತ್ತು ತ್ರಿಚಕ್ರವಾಹನ ಸೇವೆ ಒದಗಿಸುವಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಹಾಗಾಗಿ, ಹಲವು ನಗರಗಳಿಗೆ ಸೇವೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.