ಬೆಂಗಳೂರು: ಓಡಾಟಕ್ಕೆ ನಿರ್ಬಂಧಗಳು ಇರುವ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಅನುಕೂಲ ಆಗುವಂತೆ ರ್‍ಯಾಪಿಡೊ ಕಂಪನಿಯು ಸ್ವಿಗ್ಗಿ, ಜೊಮ್ಯಾಟೊ, ಬಿಗ್‌ಬಾಸ್ಕೆಟ್, ಡೆಲಿವರಿ, ಪ್ರಾಕ್ಟೊ, ಗ್ರ್ಯಾಬ್, ಎಕ್ಸ್‌ಪ್ರೆಸ್‌ಬೀ ಮತ್ತು ಉಡಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರು, ದೆಹಲಿ–ಎನ್‌ಸಿಆರ್, ಚೆನ್ನೈ, ಕೋಲ್ಕತ್ತ, ವಿಜಯವಾಡ, ತಿರುಪತಿ ಮತ್ತು ಗುಂಟೂರು ಪ್ರದೇಶಗಳಲ್ಲಿ ಔಷಧ ವಸ್ತುಗಳು, ದಿನಸಿ, ಆಹಾರ ತಿನಿಸುಗಳು, ಸಣ್ಣ ಉದ್ದಿಮೆಗಳಿಗೆ ಅಗತ್ಯವಾದ ವಸ್ತುಗಳನ್ನು ತಲುಪಿಸಲು ರ್‍ಯಾಪಿಡೊ ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.