ಮುಂಬೈ: 2024–25ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಆರ್‌ಬಿಐ ತನ್ನ ಚಿನ್ನ ಸಂಗ್ರಹದ ಮೀಸಲಿಗೆ 25 ಟನ್ ಚಿನ್ನ ಸೇರ್ಪಡೆ ಮಾಡಿಕೊಂಡಿದೆ.
ಪ್ರಸ್ತುತ ಆರ್‌ಬಿಐ ಬಳಿ ಇರುವ ಚಿನ್ನದ ಸಂಗ್ರಹ ಪ್ರಮಾಣ 879.59 ಟನ್ ಆಗಿದೆ. 2024ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 854.73 ಟನ್‌ನಷ್ಟಿತ್ತು. ಕಳೆದ ಆರ್ಥಿಕ ವರ್ಷದಲ್ಲಿ 57 ಟನ್ ಚಿನ್ನವನ್ನು ಆರ್‌ಬಿಐ ಖರೀದಿಸಿದೆ. ಈ ಅವಧಿಯಲ್ಲಿ ಹಳದಿ ಲೋಹದ ದರದಲ್ಲಿ ಶೇ 30ರಷ್ಟು ಏರಿಕೆಯಾಗಿದೆ ಎಂದು ಸೋಮವಾರ ಆರ್‌ಬಿಐ ತಿಳಿಸಿದೆ.
ಸ್ಥಳೀಯವಾಗಿ 512 ಟನ್ ಚಿನ್ನದ ದಾಸ್ತಾನು ಮಾಡಲಾಗಿದೆ. ವಿದೇಶದ ಬ್ಯಾಂಕ್‌ಗಳಲ್ಲಿ ಉಳಿದ ಚಿನ್ನದ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.