ADVERTISEMENT

ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಹಣ ವರ್ಗಾವಣೆ: ಆರ್‌ಬಿಐ

ಪಿಟಿಐ
Published 13 ಆಗಸ್ಟ್ 2025, 15:45 IST
Last Updated 13 ಆಗಸ್ಟ್ 2025, 15:45 IST
<div class="paragraphs"><p>ಆರ್‌ಬಿಐ</p></div>

ಆರ್‌ಬಿಐ

   

ಮುಂಬೈ: ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ ಕೆಲವೇ ತಾಸುಗಳಲ್ಲಿ ಹಣದ ವರ್ಗಾವಣೆ ಆಗುವ ಸೌಲಭ್ಯವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಕ್ಟೋಬರ್‌ 4ರಿಂದ ಜಾರಿಗೆ ತರಲಿದೆ.

ಈಗಿರುವ ವ್ಯವಸ್ಥೆಯಲ್ಲಿ ಚೆಕ್‌ ಸಲ್ಲಿಸಿದ ನಂತರ, ಹಣದ ವರ್ಗಾವಣೆ ಪೂರ್ಣಗೊಳ್ಳಲು ಗರಿಷ್ಠ ಎರಡು ಕೆಲಸದ ದಿನಗಳು ಬೇಕಾಗುತ್ತವೆ.

ADVERTISEMENT

ಹೊಸ ವ್ಯವಸ್ಥೆಯು ಜಾರಿಗೆ ಬಂದ ನಂತರದಲ್ಲಿ ಚೆಕ್‌ಗಳನ್ನು ಸ್ಕ್ಯಾನ್‌ ಮಾಡಿ, ಸಂಬಂಧಪಟ್ಟ ವಿಭಾಗಕ್ಕೆ/ಏಜೆನ್ಸಿಗೆ ಅದನ್ನು ಸಲ್ಲಿಸಿ, ಕೆಲವೇ ಗಂಟೆಗಳಲ್ಲಿ ಹಣದ ವರ್ಗಾವಣೆಗೆ ಅನುಮೋದನೆ ಸಿಗಲಿದೆ.

ಚೆಕ್ ಸಲ್ಲಿಕೆಯಾದ ನಂತರ ಹಣದ ವರ್ಗಾವಣೆಯನ್ನು ಪೂರ್ಣಗೊಳಿಸುವ ವ್ಯವಸ್ಥೆಯಲ್ಲಿನ ದಕ್ಷತೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಹಾಗೂ ಹಣದ ವರ್ಗಾವಣೆಯಲ್ಲಿನ ಅಪಾಯಗಳನ್ನು ತಗ್ಗಿಸಲು ಆರ್‌ಬಿಐ ಈಗಿನ ಪ್ರಕ್ರಿಯೆಗಳಲ್ಲಿ ಬದಲಾವಣೆ ತರಲಿದೆ. ಚೆಕ್‌ಗಳನ್ನು ಒಂದೊಂದು ಬ್ಯಾಚ್‌ನಲ್ಲಿ ಪರಿಶೀಲಿಸುವ ಬದಲು, ಅವುಗಳನ್ನು ನಿರಂತರವಾಗಿ ಪರಿಶೀಲಿಸಿ, ಹಣದ ವರ್ಗಾವಣೆ ಪೂರ್ಣಗೊಳಿಸುವ ವ್ಯವಸ್ಥೆ ಬರಲಿದೆ.

ಚೆಕ್ ಸ್ವೀಕರಿಸುವ ಬ್ಯಾಂಕ್‌ಗಳು ಅವುಗಳನ್ನು ಸ್ಕ್ಯಾನ್‌ ಮಾಡಿ ಸಂಬಂಧಪಟ್ಟ ಏಜೆನ್ಸಿಗೆ ತಕ್ಷಣವೇ, ನಿರಂತರವಾಗಿ ರವಾನಿಸುತ್ತವೆ ಎಂದು ಆರ್‌ಬಿಐ ಹೇಳಿದೆ. ವ್ಯವಸ್ಥೆಯಲ್ಲಿ ತರಲಿರುವ ಬದಲಾವಣೆಯನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಸಮರ್ಪಕವಾಗಿ ತಿಳಿಸಬೇಕು ಎಂದು ಆರ್‌ಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.