ADVERTISEMENT

ಎನ್‌ಇಎಫ್‌ಟಿ ಶುಲ್ಕ ರದ್ದು: ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:45 IST
Last Updated 6 ಜೂನ್ 2019, 19:45 IST
ಆರ್‌ಬಿಐ ಲಾಂಛನ
ಆರ್‌ಬಿಐ ಲಾಂಛನ   

ಮುಂಬೈ (ಪಿಟಿಐ): ಇಂಟರ್‌ನೆಟ್‌ ಬ್ಯಾಂಕಿಂಗ್‌ ವಹಿವಾಟಿನಲ್ಲಿ ಆರ್‌ಟಿಜಿಎಸ್‌ ಮತ್ತು ಎನ್‌ಇಎಫ್‌ಟಿ ಮೂಲಕ ಹಣ ವರ್ಗಾಯಿಸುವುದಕ್ಕೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಆರ್‌ಬಿಐ ರದ್ದುಪಡಿಸಿದೆ.

ಶುಲ್ಕ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಬ್ಯಾಂಕ್‌ಗಳಿಗೆ ಕೇಳಿಕೊಂಡಿದೆ.

ವೃದ್ಧಿ ದರ ಇಳಿಕೆ: 2019–20ರ ಹಣಕಾಸು ವರ್ಷದ ವೃದ್ಧಿ ದರವನ್ನೂ ಆರ್‌ಬಿಐ ಶೇ 7.2 ರಿಂದ ಶೇ 7ಕ್ಕೆ ಇಳಿಸಿದೆ. ದೇಶಿ ಆರ್ಥಿಕತೆಯ ಅಭಿವೃದ್ಧಿಯ ವೇಗ ದುರ್ಬಲವಾಗಿದೆ ಎಂದು ಆರ್‌ಬಿಐ ತನ್ನ ಹಣಕಾಸು ನೀತಿ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.