ADVERTISEMENT

ಗುರುರಾಘವೇಂದ್ರ ಬ್ಯಾಂಕ್: ಠೇವಣಿ ವಾಪಸಾತಿ ಮಿತಿ ಹೆಚ್ಚಳ

ಪಿಟಿಐ
Published 20 ಜೂನ್ 2020, 8:47 IST
Last Updated 20 ಜೂನ್ 2020, 8:47 IST
   

ಮುಂಬೈ: ನಿರ್ಬಂಧಕ್ಕೆ ಒಳಪಟ್ಟಿರುವ ಬೆಂಗಳೂರಿನ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದ ಗ್ರಾಹಕರು ಠೇವಣಿ ವಾಪಸ್‌ ಪಡೆಯುವ ಮಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ₹ 1 ಲಕ್ಷಕ್ಕೆ ಹೆಚ್ಚಿಸಿದೆ.

ಮಿತಿ ಸಡಿಲಿಕೆಯಿಂದ ಪ್ರತಿಯೊಬ್ಬ ಗ್ರಾಹಕ ಈಗ ಗರಿಷ್ಠ ₹ 1 ಲಕ್ಷದವರೆಗಿನ ತಮ್ಮ ಠೇವಣಿ ಮೊತ್ತವನ್ನು ಹಿಂದೆ ಪಡೆಯಬಹುದು. ಇದು ಈ ಹಿಂದೆ ಅನುಮತಿ ನೀಡಲಾಗಿದ್ದ ₹ 35 ಸಾವಿರ ಮೊತ್ತವನ್ನೂ ಒಳಗೊಂಡಿರಲಿದೆ.

ಈ ಹೊಸ ಸಡಿಲಿಕೆಯಿಂದ ಬ್ಯಾಂಕ್‌ನ ಶೇ 54ಕ್ಕೂ ಹೆಚ್ಚು ಠೇವಣಿದಾರರು ತಮ್ಮೆಲ್ಲ ಹಣವನ್ನು ಹಿಂದೆ ಪಡೆಯಲು ಸಾಧ್ಯವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.

ADVERTISEMENT

ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಕೋ–ಆಪರೇಟಿವ್‌ ಬ್ಯಾಂಕ್‌ (ಪಿಎಂಸಿ) ಸೇರಿದಂತೆ ಒಟ್ಟು ಐದು ಸಹಕಾರಿ ಬ್ಯಾಂಕ್‌ಗಳಿಂದ ಠೇವಣಿ ಹಿಂದೆ ಪಡೆಯುವ ಮಿತಿಯನ್ನು ಆರ್‌ಬಿಐ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.