ಮುಂಬೈ: ಅಮೆಜಾನ್ ಪೇ ಇಂಡಿಯಾ ಪ್ರೈ.ಲಿ. ಕಂಪನಿಗೆ ₹ 3.06 ಕೋಟಿ ದಂಡ ವಿಧಿಸಿರುವುದಾಗಿ ಆರ್ಬಿಐ ಶುಕ್ರವಾರ ಹೇಳಿದೆ. ಕೆವೈಸಿ ಸಂಬಂಧಿತ ಕೆಲವು ಸೂಚನೆಗಳು ಹಾಗೂ ಪ್ರಿಪೇಯ್ಡ್ ಪಾವತಿ ಸಾಧನಗಳಿಗೆ (ಪಿಪಿಐ) ಸಂಬಂಧಿಸಿದ ನಿಯಮಗಳನ್ನು ಪಾಲಿಸದೆ ಇದ್ದುದಕ್ಕಾಗಿ ಈ ದಂಡ ವಿಧಿಸಲಾಗಿದೆ.
ಸೂಚನೆಗಳನ್ನು ಪಾಲಿಸದೆ ಇದ್ದುದಕ್ಕಾಗಿ ದಂಡ ಏಕೆ ವಿಧಿಸಬಾರದು ಎಂದು ಕೇಳಿ ಆರ್ಬಿಐ, ಅಮೆಜಾನ್ಗೆ ನೋಟಿಸ್ ಜಾರಿಗೊಳಿಸಿತ್ತು. ಅಮೆಜಾನ್ ಪೇ ಕಂಪನಿಯು ಇ–ವಾಣಿಜ್ಯ ಕ್ಷೇತ್ರದ ದೈತ್ಯ ಅಮೆಜಾನ್ನ ಡಿಜಿಟಲ್ ಪಾವತಿ ಅಂಗ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.