ADVERTISEMENT

’ಎಂಎಸ್‌ಎಂಇ’ ವಲಯಕ್ಕೆಆರ್‌ಬಿಐ ಕೊಡುಗೆ

ಪಿಟಿಐ
Published 1 ಜನವರಿ 2019, 17:19 IST
Last Updated 1 ಜನವರಿ 2019, 17:19 IST

ಮುಂಬೈ : ಒಂದು ಬಾರಿ ಸಾಲ ಪುನರ್‌ ಹೊಂದಾಣಿಕೆ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ (ಎಂಎಸ್‌ಎಂಇ) ಅವಕಾಶ ಮಾಡಿಕೊಟ್ಟಿದೆ.

‘ಎಂಎಸ್‌ಎಂಇ’ ಪಾಲಿಗೆ ಇದೊಂದು ಹೊಸ ವರ್ಷದ ಕೊಡುಗೆಯಾಗಿದೆ. ₹ 25 ಕೋಟಿವರೆಗಿನ ಸಾಲ ಮರು ಪಾವತಿಸದ, ನೋಟು ರದ್ದತಿ, ಜಿಎಸ್‌ಟಿ ಜಾರಿಯಿಂದ ನಗದು ಕೊರತೆ ಎದುರಿಸುತ್ತಿರುವ ಕೈಗಾರಿಕೆಗಳಿಗೆ ಇದು ಹೆಚ್ಚು ಪ್ರಯೋಜನಕ್ಕೆ ಬರಲಿದೆ.

ಸಾಲಗಳ ಪುನರ್‌ ಹೊಂದಾಣಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಆರ್‌ಬಿಐ ನಿರ್ದೇಶಕ ಮಂಡಳಿ ನಿರ್ಧರಿಸಿತ್ತು. 2020ರ ಮಾರ್ಚ್‌ 31ರ ಒಳಗೆ ಸುಸ್ತಿ ಸಾಲಗಳ ಪುನರ್‌ ಹೊಂದಾಣಿಕೆಗೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.