ADVERTISEMENT

ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: RBI

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 12:43 IST
Last Updated 1 ಅಕ್ಟೋಬರ್ 2025, 12:43 IST
   

ನವದೆಹಲಿ: ಅಮೆರಿಕದ ಸುಂಕ ಆತಂಕದ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಸತತ ಎರಡನೇ ಬಾರಿಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಯಾವುದೇ ಬದಲಾವಣೆ ಮಾಡಿಲ್ಲ.

ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣಕಾಸು ನೀತಿ ಸಮಿತಿ (ಎಂಪಿಸಿ) ಅಲ್ಪಾವಧಿಯ ಸಾಲ ದರ ಅಥವಾ ರೆಪೊ ದರವನ್ನು ಶೇ 5.5 ರಲ್ಲಿ ಯಥಾಸ್ಥಿತಿಯಲ್ಲಿಡಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಹೇಳಿದರು.

ಜಿಎಸ್‌ಟಿ ದರಗಳ ತರ್ಕಬದ್ಧೀಕರಣವು ಬಳಕೆ ಮತ್ತು ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆಯಾದರೂ, ಸುಂಕ ಸಂಬಂಧಿತ ಬೆಳವಣಿಗೆಗಳು ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ವಿಸ್ತರಣೆಯನ್ನು ನಿಧಾನಗೊಳಿಸಬಹುದು ಎಂದು ಅವರು ಹೇಳಿದರು.

ADVERTISEMENT

2025ರ ಫೆಬ್ರುವರಿಯಿಂದ, ಆರ್‌ಬಿಐ ರೆಪೊ ದರವನ್ನು 100 ‌ಮೂಲಾಂಶಗಳಷ್ಟು ಕಡಿಮೆ ಮಾಡಿದೆ. ಜೂನ್‌ನಲ್ಲಿ ನಡೆದ ಹಿಂದಿನ ಸಭದಯಲ್ಲಿ ರೆಪೊ ದರವನ್ನು 50 ಮೂಲಾಂಶದಷ್ಟು ಕಡಿತ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.