ADVERTISEMENT

ರಿಯಲ್‌ಮೀ: 3 ಮೊಬೈಲ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 18:37 IST
Last Updated 5 ಜನವರಿ 2019, 18:37 IST

ಬೆಂಗಳೂರು: ಸ್ಮಾರ್ಟ್‌ಫೋನ್‌ ತಯಾರಿಸುವ ರಿಯಲ್‌ಮೀ ಕಂಪನಿಯು ರಿಯಲ್ ಮೀ2, ರಿಯಲ್‍ಮೀ2 (ಪ್ರೋ) ಹಾಗೂರಿಯಲ್‍ಮೀ ಸಿ1 ಎಂಬ ಮೂರು ಸ್ಮಾರ್ಟ್‌ಫೋನ್‌ಗಳನ್ನುರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕಂಪನಿ ಅಧ್ಯಕ್ಷ ಮೈಕೆಲ್‌ ಅವರು ಆಂಡ್ರಾಯ್ಡ್‌ ಕಾರ್ಯಾಚರಣಾ ವ್ಯವಸ್ಥೆಯ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದರು. ಈ ಮೊಬೈಲ್‌ಗಳ ಬೆಲೆಯನ್ನು ಕಂಪನಿ ಇನ್ನಷ್ಟೇ ನೀಡಬೇಕಿದೆ.

‘ರಿಯಲ್‍ಮೀ ದೇಶಾದ್ಯಂತ ಹತ್ತು ನಗರಗಳಲ್ಲಿ ಜನವರಿ 2019ರಲ್ಲಿ ಪ್ರಾರಂಭವಾಗಿದ್ದು, ಪ್ರತಿ ತ್ರೈಮಾಸಿಕದಲ್ಲಿ 50 ನಗರಗಳಿಗೆ ವಿಸ್ತರಣೆಯಾಗಲಿದೆ. ಬೆಂಗಳೂರು ನಗರದ ವಿಸ್ತರಣೆಯೊಂದಿಗೆ ದೇಶದಾದ್ಯಂತ 20 ಸಾವಿರ ಮಳಿಗೆಗಳನ್ನು ಸ್ಥಾಪಿಸಲಿದೆ. ಕರ್ನಾಟಕದಲ್ಲಿ 500 ಮಳಿಗೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ಬೆಂಗಳೂರಿನಲ್ಲಿ 150 ಉನ್ನತ ರೀಟೆಲ್ ಪಾಲುದಾರರು ಇದ್ದಾರೆ’ ಎಂದು ಸಿಇಒ ಮಾಧವ ಸೇಠ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಬಡ ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್‌ ನೀಡುವ ಉದ್ದೇಶದಿಂದ ₹ 5 ಸಾವಿರದಿಂದ ₹ 20 ಸಾವಿರದವರೆಗಿನ ಬೆಲೆಯ ಫೋನ್‌ಗಳನ್ನು ಪರಿಚಯಿಸಲಾಗಿದೆ’ ಎಂದರು.

ರಾಷ್ಟ್ರೀಯ ಮಾರುಕಟ್ಟೆ ಮುಖ್ಯಸ್ಥ ದಿಪೇಶ್‌, ರಾಜ್ಯ ವಿತರಕ ಬಿಲಾಲ್‌ ಹಹೀಬ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.