ಬೆಂಗಳೂರು: ರಿಲಯನ್ಸ್ ಡಿಜಿಟಲ್ ಮೇ 31ರಿಂದ ಆಗಸ್ಟ್ 31ರ ವರೆಗೆ ಲ್ಯಾಪ್‌ಟಾಪ್ ಮಾರಾಟ ಮೇಳ ಹಮ್ಮಿಕೊಂಡಿದೆ.
‘ಬೂಟ್ ಅಪ್ ಇಂಡಿಯಾ’ ಹೆಸರಿನ ಈ ಅಭಿಯಾನವನ್ನು ಬಹುಮುಖ್ಯವಾಗಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿದೆ.
ಈ ಮಾರಾಟ ಸೌಲಭ್ಯವು ಎಲ್ಲಾ ರಿಲಯನ್ಸ್ ಡಿಜಿಟಲ್ ಮಳಿಗೆ, ಮೈ ಜಿಯೊ ಸ್ಟೋರ್ಸ್ ಮತ್ತು ರಿಲಯನ್ಸ್ ಡಿಜಿಟಲ್ ಡಾಟ್ ಇನ್‌ನಲ್ಲಿ ದೊರೆಯಲಿದೆ. ದೇಶದ ಭವಿಷ್ಯದ ನಾಯಕರು ಮತ್ತು ಅನ್ವೇಷಕರನ್ನು ರೂಪಿಸುವುದು ಇದರ ಗುರಿಯಾಗಿದೆ ಎಂದು ರಿಲಯನ್ಸ್ ಡಿಜಿಟಲ್ ತಿಳಿಸಿದೆ.
ಹಾಲಿ ಇರುವ ದರದಲ್ಲಿ ಲ್ಯಾಪ್‌ಟಾಪ್, ಬಿಡಿಭಾಗಗಳು ಹಾಗೂ ಇತರೆ ಐ.ಟಿ ಪರಿಕರಗಳನ್ನು ಖರೀದಿಸಬಹುದಾಗಿದೆ. ಈ ಖರೀದಿಯೊಂದಿಗೆ ರಿವಾರ್ಡ್ ಪಾಯಿಂಟ್‌ಗಳು ಕೂಡ ದೊರೆಯಲಿವೆ ಎಂದು ಹೇಳಿದೆ.
ಈ ಅಭಿಯಾನದಲ್ಲಿ ವಿದ್ಯಾರ್ಥಿ ವೇತನಕ್ಕೆ ₹1 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ. ವಿಜೇತರಾದವರಿಗೆ
25 ಕಾರು, 40 ಬೈಕ್‌ಗಳು ಮತ್ತು 450 ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.