ADVERTISEMENT

ಷೇರುಪೇಟೆ: ರಿಲಯನ್ಸ್‌, ಅದಾನಿ ಸಮೂಹಕ್ಕೆ ಲಾಭ

ಪಿಟಿಐ
Published 10 ಜನವರಿ 2024, 16:03 IST
Last Updated 10 ಜನವರಿ 2024, 16:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಷೇರುಪೇಟೆ ವಹಿವಾಟಿನಲ್ಲಿ ಬುಧವಾರ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಅದಾನಿ ಸಮೂಹವು ಗಳಿಕೆ ಕಂಡಿದೆ.

ರಿಲಯನ್ಸ್‌ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹46,810 ಕೋಟಿ ಸೇರ್ಪಡೆಯಾಯಿತು. ಕಂಪನಿಯ ಒಟ್ಟು ಮೌಲ್ಯ ₹17.92 ಲಕ್ಷ ಕೋಟಿಗೆ ಮುಟ್ಟಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ಷೇರುಗಳ ಮೌಲ್ಯ ಶೇ 2.69ರಷ್ಟು ಏರಿಕೆಯಾಗಿದೆ. ಪ್ರತಿ ಷೇರು ₹2,649 ದಾಖಲಿಸಿದೆ. 

ADVERTISEMENT

8 ಕಂಪನಿಗಳಿಗೆ ಲಾಭ: ಅದಾನಿ ಸಮೂಹದ 10 ಕಂಪನಿಗಳ ಪೈಕಿ 8 ಕಂಪನಿಗಳ ಷೇರಿನ ಮೌಲ್ಯ ಏರಿಕೆ ಕಂಡಿದೆ. 

ಎನ್‌ಡಿಟಿವಿ (ಶೇ 3.38), ಅದಾನಿ ಎಂಟರ್‌ಪ್ರೈಸಸ್‌ (ಶೇ 2.79), ಅದಾನಿ ಗ್ರೀನ್‌ ಎನರ್ಜಿ (ಶೇ 2.35), ಅದಾನಿ ಪೋರ್ಟ್ಸ್‌ (ಶೇ 1.47) ಅದಾನಿ ಎನರ್ಜಿ ಸಲ್ಯೂಷನ್ಸ್‌ (ಶೇ 0.62), ಅದಾನಿ ಪವರ್‌ (ಶೇ 0.49) ಅದಾನಿ ಟೋಟಲ್‌ ಗ್ಯಾಸ್‌ (ಶೇ 0.25) ಮತ್ತು ಅಂಬುಜಾ ಸಿಮೆಂಟ್ಸ್‌ (ಶೇ 0.15) ಷೇರು ಗಳಿಕೆ ಕಂಡಿವೆ. ಅದಾನಿ ವಿಲ್ಮಾರ್‌ (ಶೇ 0.68) ಮತ್ತು ಎಸಿಸಿ (ಶೇ 0.02) ಇಳಿಕೆ ದಾಖಲಿಸಿವೆ.

ಬಿಎಸ್‌ಇ ಸೆನ್ಸೆಕ್ಸ್‌ 271 ಅಂಶ ಏರಿಕೆಯಾಗಿ 71,657ಕ್ಕೆ ವಹಿವಾಟನ್ನು ಮುಕ್ತಾಯಗೊಳಿಸಿತು. ನಿಫ್ಟಿ 73 ಅಂಶ ಹೆಚ್ಚಳವಾಗಿ 21,618ಕ್ಕೆ ಅಂತ್ಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.