ADVERTISEMENT

4ಜಿ: ಮುಂಚೂಣಿಯಲ್ಲಿ ಜಿಯೊ

ಪಿಟಿಐ
Published 17 ನವೆಂಬರ್ 2022, 13:23 IST
Last Updated 17 ನವೆಂಬರ್ 2022, 13:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 4ಜಿ ಡೌನ್‌ಲೋಡ್‌ ಮತ್ತು ಅಪ್‌ಲೋಡ್‌ ವೇಗಕ್ಕೆ ಸಂಬಂಧಿಸಿದಂತೆ ಜಿಯೊ ಕಂಪನಿಯು ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಗುರುವಾರ ಹೇಳಿದೆ.

ಬಿಎಸ್‌ಎನ್‌ಎಲ್‌ ಈಗಷ್ಟೇ 4ಜಿ ಸೇವೆಗಳನ್ನು ಆರಂಭಿಸಿರುವುದರಿಂದ ಪ್ರಾಧಿಕಾರವು ಅಕ್ಟೋಬರ್‌ ತಿಂಗಳ ಪಟ್ಟಿಯಿಂದ ಕಂಪನಿಯನ್ನು ಕೈಬಿಟ್ಟಿದೆ.

ಅಕ್ಟೋಬರ್‌ನಲ್ಲಿ ಜಿಯೊದ ಡೌನ್‌ಲೋಡ್‌ ವೇಗವು ಪ್ರತಿ ಸೆಕೆಂಡ್‌ಗೆಸರಾಸರಿ 20.3 ಎಂಬಿ ಇದೆ. ಏರ್‌ಟೆಲ್‌ 15ಎಂಬಿಪಿಎಸ್‌ ಮತ್ತು ವೊಡಾಫೋನ್‌ ಐಡಿಯಾ 14.5 ಎಂಬಿಪಿಎಸ್‌ ವೇಗ ಹೊಂದಿವೆ.

ADVERTISEMENT

ಜಿಯೊದ 4ಜಿ ಅಪ್‌ಲೋಡ್‌ ವೇಗವು ಅಕ್ಟೋಬರ್‌ನಲ್ಲಿ 6.4ಎಂಬಿಪಿಎಸ್‌ನಿಂದ 6.2 ಎಂಬಿಪಿಎಸ್‌ಗೆ ಅಲ್ಪ ಇಳಿಕೆ ಕಂಡಿದೆ. ಹೀಗಿದ್ದರೂ ಜಿಯೊ ಮೊದಲ ಸ್ಥಾನದಲ್ಲೇ ಇದೆ. ವೊಡಾಫೋನ್‌ ಐಡಿಯಾ 4.5 ಎಂಬಿಪಿಎಸ್‌ ಮತ್ತು ಏರ್‌ಟೆಲ್‌ 2.7 ಎಂಬಿಪಿಎಸ್‌ ಅಪ್‌ಲೋಡ್‌ ವೇಗ ಹೊಂದಿದ್ದು, ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ ಎಂದು ಟ್ರಾಯ್‌ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.