ADVERTISEMENT

ರಿಲಯನ್ಸ್‌: 200 ನಗರಗಳಲ್ಲಿ ಜಿಯೊಮಾರ್ಟ್‌ನ ದಿನಸಿ ವ್ಯಾಪಾರ

ಪಿಟಿಐ
Published 26 ಮೇ 2020, 20:00 IST
Last Updated 26 ಮೇ 2020, 20:00 IST
   

ನವದೆಹಲಿ: ಕೋಟ್ಯಧಿಪತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌, ಜಿಯೊಮಾರ್ಟ್‌ ಬ್ರ್ಯಾಂಡ್‌ನಡಿ ತನ್ನ ದಿನಸಿ ಆನ್‌ಲೈನ್‌ ವಹಿವಾಟನ್ನು ದೇಶದ 200 ನಗರಗಳಲ್ಲಿ ಆರಂಭಿಸಿದೆ.

ಬೆಂಗಳೂರು,ಮೈಸೂರು ಸೇರಿದಂತೆ ಮುಂಬೈ, ದೆಹಲಿ, ಕೋಲ್ಕತ್ತ ನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಗ್ರಾಹಕರು ಜಿಯೊಮಾರ್ಟ್‌ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಸರಕುಗಳನ್ನು ಖರೀದಿಸಬಹುದು. ತರಕಾರಿ, ಹಣ್ಣು, ದವಸ ಧಾನ್ಯ, ಕುರುಕಲು ತಿಂಡಿ, ಪಾನೀಯ, ಬ್ರ್ಯಾಂಡೆಡ್‌ ಆಹಾರ, ಗೃಹ ಬಳಕೆ ಸಲಕರಣೆಗಳನ್ನು ಇಲ್ಲಿ ಖರೀದಿಸಬಹುದು. ರಿಲಯನ್ಸ್‌ ಉತ್ಪನ್ನಗಳೂ ಲಭ್ಯ ಇರಲಿವೆ.

ಲಾಕ್‌ಡೌನ್‌ ಕಾರಣಕ್ಕೆ ದಿನಸಿಗಳನ್ನು ಮನೆ ಬಾಗಿಲಿಗೆ ವಿತರಿಸುವುದಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಿಲ್ಲ. ಎರಡು ದಿನಗಳಲ್ಲಿ ಪೂರೈಸುವ ಭರವಸೆ ನೀಡಲಾಗಿದೆ.

ADVERTISEMENT

ಜಿಯೊದ 40 ಕೋಟಿಗೂ ಹೆಚ್ಚು ಚಂದಾದಾರರನ್ನು ತನ್ನ ಇ–ಕಾಮರ್ಸ್‌ ವಹಿವಾಟಿನ ಗ್ರಾಹಕರನ್ನಾಗಿ ಬದಲಿಸಲು ರಿಲಯನ್ಸ್‌ ಕಾರ್ಯಪ್ರವೃತ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.