ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಬಹುತೇಕ ಸಣ್ಣ ಉದ್ದಿಮೆಗಳು ನೆಲಕಚ್ಚಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಕೊರೊನಾ ಸೃಷ್ಟಿರುವ ಆತಂಕ ದಿಂದಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದ ಉದ್ದಿಮೆಗಳು ಬೆಳವಣಿಗೆಯ ಉತ್ತುಂಗಕ್ಕೆ ತಲುಪಿವೆ ಎನ್ನುತ್ತಿದೆ ಇನ್‌ಸ್ಟಾಮೊಜೊ ಕಂಪನಿಯ ವರದಿ.
ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಡಿಜಿಟಲ್ ರೂಪದ ಪರಿಹಾರ ಒದಗಿಸುವ ಇನ್‌ಸ್ಟಾಮೊಜೊ ನಡೆಸಿ
ರುವ ಸಮೀಕ್ಷೆಯಿಂದ ಲಾಕ್‌ಡೌನ್ ಸಂದರ್ಭದಲ್ಲಿನ ಕೆಲವು ಆಸಕ್ತಿಕರ ಸಂಗತಿಗಳು ಬೆಳಕಿಗೆ ಬಂದಿವೆ.
‘ಕೊರೊನಾ ಸೃಷ್ಟಿಸಿರುವ ಆತಂಕವು ಜನರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದರಿಂದಾಗಿ ಧಾರ್ಮಿಕ, ಅಧ್ಯಾತ್ಮದತ್ತ ಜನರು ಹೆಚ್ಚು ಗಮನ ನೀಡುತ್ತಿದ್ದಾರೆ. ಆರೋಗ್ಯದ ಕಾಳಜಿ ದೃಷ್ಟಿಯಿಂದ ಗುಣಮಟ್ಟದ ಆಹಾರಮತ್ತು ನೈರ್ಮಲ್ಯ ಉತ್ಪನ್ನಗಳನ್ನುತಯಾರಿಸುವ ಸಣ್ಣ ಉದ್ದಿಮೆಗಳಿಗೆ ಹೆಚ್ಚು ಬೇಡಿಕೆ ಬರಲಾರಂಭಿಸಿದೆ. ಮುಖ್ಯವಾಗಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು, ಪೂಜೆಗೆ ಸಂಬಂಧಿಸಿದ ಸಿ.ಡಿ ಮತ್ತುಇ–ಬುಕ್‌ಗಳ ಮಾರಾಟ ಹೆಚ್ಚಾಗುತ್ತಿದೆ. ಉದಾಹರಣೆ ಕೊಡುವುದಾದರೆ, ಇನ್‌ಸ್ಟಾಮೊಜೊದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಮಳಿಗೆಯೂ ಇದೆ. ಸದ್ಗುರು ಅವರ ಪ್ರವಚನಗಳು ಮತ್ತು ಇಶಾ ಮ್ಯೂಸಿಕ್ ಸಂಗ್ರಹಗಳಿಗೆ ಹೆಚ್ಚು ಬೇಡಿಕೆ ಇದೆ’ ಎಂದು ಇನ್‌ಸ್ಟಾಮೊಜೊ ಸಹ ಸ್ಥಾಪಕ ಸಂಪದ್ ಸ್ವೈನ್ ತಿಳಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ, ಡಿಜಿಟಲ್ ಮೂಲಕ ನಡೆಯುವ ವಹಿವಾಟಿನ ಪ್ರಮಾಣವೇ ಹೆಚ್ಚಿದೆ. ಕೊರೊನಾ ವಾರಿಯರ್ಸ್‌ಗೆ ನೆರವಾಗುವ ಉದ್ದೇಶದಿಂದ ಲಾಭಯೇತರ ಸಂಘಸಂಸ್ಥೆಗಳಿಗೆ ಡಿಜಿಟಲ್ ರೂಪದಲ್ಲಿ ಹಣ ವರ್ಗಾವಣೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ.
ಸಣ್ಣ ಉದ್ದಿಮೆಗಳಲ್ಲಿ ಡಿಜಿಟಲ್ ಕ್ರಾಂತಿ:ಈ ಲಾಕ್‌ಡೌನ್ ಅವಧಿಯು ಎಂಎಸ್‌ಎಂಇಗಳಿಗೆ ಡಿಜಿಟಲ್ ವಹಿವಾಟಿನ ಮಹತ್ವವನ್ನು ತಿಳಿಸುವಂತೆ ಮಾಡಿದೆ.ಹೀಗಾಗಿಪಾವತಿ ಆಯ್ಕೆಗಳಷ್ಟೇ ಅಲ್ಲದೆ ಡಿಜಿಟಲ್ ಮಳಿಗೆಗಳ ಸ್ಥಾಪನೆಗೂ ಇನ್‌ಸ್ಟಾಮೊಜೊ ನೆರವಾಗುತ್ತಿದೆ.
ವರದಿಗಳ ಪ್ರಕಾರ, ನಿತ್ಯವೂ ಅಸಂಖ್ಯ ಭಾರತೀಯರು ಆನ್‌ಲೈನ್ ಬಳಕೆ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ಅಂದಾಜು 20 ಲಕ್ಷ ವರ್ತಕರು ಆನ್‌ಲೈನ್ ವಹಿವಾಟಿಗೆ ತೆರೆದುಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ತೆರವಾದ ಬಳಿಕ ಸಣ್ಣ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್ ಮೂಲಕ ವಹಿವಾಟು ಆರಂಭಿಸುವುದರಿಂದ ಈ ವಲಯದಲ್ಲಿ ಹೊಸ ಡಿಜಿಟಲ್ ಕ್ರಾಂತಿಗೆ ಕಾರಣವಾಗಲಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.