ADVERTISEMENT

ರೆಪೊ ದರ ಕಡಿಮೆಯಾದ ಸೌಲಭ್ಯ: ಖಾಸಗಿ ಬ್ಯಾಂಕ್‌ಗಳ ವಿರುದ್ಧ ಎಫ್‌ಎಡಿಎ ದೂರು

ಪಿಟಿಐ
Published 26 ಜುಲೈ 2025, 15:48 IST
Last Updated 26 ಜುಲೈ 2025, 15:48 IST
ಆರ್‌ಬಿಐ
ಆರ್‌ಬಿಐ   

ನವದೆಹಲಿ: ರೆಪೊ ದರ ಕಡಿಮೆ ಆಗಿದ್ದರೂ ಕೆಲವು ಖಾಸಗಿ ಬ್ಯಾಂಕ್‌ಗಳು ಅದರ ಪ್ರಯೋಜನವನ್ನು ವಾಹನ ಸಾಲ ಪಡೆದವರಿಗೆ ವರ್ಗಾಯಿಸುತ್ತಿಲ್ಲ ಎಂದು ಆರೋಪಿಸಿರುವ ಆಟೊಮೊಬೈಲ್ ಡೀಲರ್‌ಗಳ ಸಂಘಟನೆಗಳ ಒಕ್ಕೂಟವು (ಎಫ್‌ಎಡಿಎ) ಈ ವಿಚಾರದಲ್ಲಿ ಆರ್‌ಬಿಐ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದೆ.

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರಿಗೆ ಪತ್ರ ಬರೆದಿರುವ ಒಕ್ಕೂಟವು, ವಾಹನಸಾಲಗಳ ಬಡ್ಡಿ ದರವನ್ನು ರೆಪೊ ದರಕ್ಕೆ ಅನುಗುಣವಾಗಿ ತಗ್ಗಿಸುವಲ್ಲಿ ಖಾಸಗಿ ಬ್ಯಾಂಕ್‌ಗಳಿಂದ ಆಗಿರುವ ವಿಳಂಬವನ್ನು ಪರಿಶೀಲಿಸಬೇಕು ಎಂದು ಕೋರಿದೆ. ಅಲ್ಲದೆ, ಈ ಬ್ಯಾಂಕ್‌ಗಳಿಗೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ನಿರ್ದೇಶನ ನೀಡಬೇಕು ಎಂದು ಕೋರಿದೆ.

‘ನಿಮ್ಮ ನಾಯಕತ್ವದಲ್ಲಿ ಆರ್‌ಬಿಐ ಅತ್ಯಂತ ತ್ವರಿತವಾಗಿ ರೆಪೊ ದರವನ್ನು ತಗ್ಗಿಸಿದೆ. ಇದು ಅರ್ಥ ವ್ಯವಸ್ಥೆಗೆ ಒಳ್ಳೆಯ ಸಂದೇಶ ರವಾನಿಸಿದೆ. ಹೀಗಿದ್ದರೂ ಈ ಪ್ರಯೋಜನವು ವಾಹನ ಸಾಲ ವಲಯದಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ರೆಪೊ ದರ ಇಳಿಕೆಯನ್ನು ವಾಹನ ಸಾಲ ಪಡೆದವರಿಗೆ ತಕ್ಷಣವೇ ವರ್ಗಾಯಿಸಿವೆ. ಆದರೆ ಖಾಸಗಿ ಸ್ವಾಮ್ಯದ ಹಲವು ಬ್ಯಾಂಕ್‌ಗಳು ಬಡ್ಡಿ ಇಳಿಕೆಯನ್ನು ವಿಳಂಬಗೊಳಿಸಿವೆ’ ಎಂದು ಒಕ್ಕೂಟದ ಉಪಾಧ್ಯಕ್ಷ ಸಾಯಿ ಗಿರಿಧರ್ ಅವರು ಆರ್‌ಬಿಐಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.