ADVERTISEMENT

ಚಿಲ್ಲರೆ ಹಣದುಬ್ಬರ: ಎಂಪಿಸಿ ಸಭೆ

ಪಿಟಿಐ
Published 27 ಅಕ್ಟೋಬರ್ 2022, 16:18 IST
Last Updated 27 ಅಕ್ಟೋಬರ್ 2022, 16:18 IST
   

ಮುಂಬೈ: ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಮಿತಿಯಲ್ಲಿ ಇರಿಸಲು ಸತತ ಮೂರು ತ್ರೈಮಾಸಿಕಗಳಲ್ಲಿ ಆಗದಿದ್ದುದು ಏಕೆ ಎಂಬ ವರದಿ ಸಿದ್ಧಪಡಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ನವೆಂಬರ್ 3ರಂದು ವಿಶೇಷ ಸಭೆ ನಡೆಸಲಿದೆ.

ಹಣದುಬ್ಬರ ನಿಯಂತ್ರಿಸಲು ಸೋತಿದ್ದು ಏಕೆ ಎಂಬ ವರದಿಯನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಎಂಪಿಸಿ ಸಿದ್ಧಪಡಿಸಲಿದೆ. ಅಲ್ಲದೆ, ಹಣದುಬ್ಬರ ನಿಯಂತ್ರಣಕ್ಕೆ ಮುಂದೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿವರವನ್ನೂ ಅದರಲ್ಲಿ ಉಲ್ಲೇಖಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT