ADVERTISEMENT

ಅರಾಮ್ಕೊ, ಬಿಪಿಗೆ ಆರ್‌ಐಎಲ್‌ ಪಾಲು

ಸಾಲದಿಂದ ಮುಕ್ತಗೊಳ್ಳುವ ಉದ್ದೇಶ: ಮುಕೇಶ್‌ ಅಂಬಾನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:00 IST
Last Updated 12 ಆಗಸ್ಟ್ 2019, 20:00 IST
ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ತಾಯಿ ಕೋಕಿಲಾಬೆನ್‌, ಪತ್ನಿ ನೀತಾ ಜತೆ ಮುಕೇಶ್‌ ಅಂಬಾನಿ  –ಪಿಟಿಐ ಚಿತ್ರ
ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ತಾಯಿ ಕೋಕಿಲಾಬೆನ್‌, ಪತ್ನಿ ನೀತಾ ಜತೆ ಮುಕೇಶ್‌ ಅಂಬಾನಿ  –ಪಿಟಿಐ ಚಿತ್ರ   

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ಸಾಲದ ಹೊರೆ ತಗ್ಗಿಸಲು ತೈಲ ಮತ್ತು ರಾಸಾಯನಿಕಗಳ ಹಾಗೂ ಇಂಧನ ಮಾರಾಟ ಜಾಲದ ವಹಿವಾಟಿನಲ್ಲಿನ ಕೆಲ ಪಾಲು ಬಂಡವಾಳವನ್ನು ಕ್ರಮವಾಗಿ ಅರಾಮ್ಕೊ ಮತ್ತು ಬಿಪಿಗೆ ಮಾರಾಟ ಮಾಡಲು ಮುಕೇಶ್‌ ಅಂಬಾನಿ ನಿರ್ಧರಿಸಿದ್ದಾರೆ.

ಸೌದಿ ಅರೇಬಿಯಾದ ತೈಲ ದೈತ್ಯ ಸಂಸ್ಥೆ ಅರಾಮ್ಕೊಗೆ ಶೇ 20 ಮತ್ತು ಬ್ರಿಟನ್ನಿನ ಬಹುರಾಷ್ಟ್ರೀಯ ತೈಲ ಮತ್ತು ನೈಸರ್ಗಿಕ ಕಂಪನಿ ಬಿಪಿಗೆ ಶೇ 49ರಷ್ಟು ಪಾಲನ್ನು ಮಾರಾಟ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.

‘ಈ ಎರಡೂ ಪಾಲು ಮಾರಾಟದ ಫಲವಾಗಿ ಆರ್‌ಐಎಲ್‌ ಒಂದೂವರೆ ವರ್ಷದಲ್ಲಿ ಸಂಪೂರ್ಣ ಸಾಲ ಮುಕ್ತ ಕಂಪನಿಯಾಗಿ ಹೊರಹೊಮ್ಮಲಿದೆ’ ಎಂದು ಮುಕೇಶ್‌ ಅವರು ಇಲ್ಲಿ ನಡೆದ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಿದರು.

ADVERTISEMENT

ದೂರಸಂಪರ್ಕ, ರಿಟೇಲ್‌ ವಹಿವಾಟು ಒಳಗೊಂಡಂತೆ ಆರ್‌ಐಎಲ್ ಉದ್ದಿಮೆಯ ಒಟ್ಟಾರೆ ಮೌಲ್ಯವು ₹ 9.38 ಲಕ್ಷ ಕೋಟಿಗಳಷ್ಟಿದೆ.

ಸಾಲದ ಹೊರೆಗೆ ಕಳವಳ: ಕಂಪನಿ ಸಾಲದ ಪ್ರಮಾಣದ ಬಗ್ಗೆ ವಹಿವಾಟು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದರು. ಸಾಲದ ಪ್ರಮಾಣ ಹೆಚ್ಚಳವು ಕಂಪನಿಯ ಬೆಳವಣಿಗೆಗೆ ಅಡ್ಡಿಪಡಿಸಲಿದೆ ಎಂದು ಕ್ರೆಡಿಟ್‌ ಸ್ಯೂಸ್‌ ಗ್ರೂಪ್‌ ಎಜಿ ಮೊನ್ನೆಯಷ್ಟೇ ಅಭಿಪ್ರಾಯಪಟ್ಟಿತ್ತು.

‘ಇದೊಂದು ಕಂಪನಿಯ ಇತಿಹಾಸ ದಲ್ಲಿನ ಅತಿದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯಾಗಿದೆ. ಸಾಲದ ಹೊರೆ ಬಗ್ಗೆ ಆತಂಕ ಪಡಬೇಕಾಗಿಲ್ಲ’ ಎಂದು ಮುಕೇಶ್‌ ಭರವಸೆ ನೀಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.