ADVERTISEMENT

ರಾಯಲ್ ಎನ್‌ಫೀಲ್ಡ್‌: 2 ಹೊಸ ಬೈಕ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 16:59 IST
Last Updated 6 ಡಿಸೆಂಬರ್ 2018, 16:59 IST
ರಾಯಲ್‌ ಎನ್‌ಫೀಲ್ಡ್‌ನ ಭಾರತದ ಬಿಸಿನೆಸ್‌ನ ಮುಖ್ಯಸ್ಥ ಶಾಜಿ ಕೋಷಿ ಮತ್ತು ರಾಯಲ್‌ ಎನ್‌ಫೀಲ್ಡ್‌ನ ಅಧ್ಯಕ್ಷ ರುದ್ರತೇಜ್‌ ಸಿಂಗ್ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದರು
ರಾಯಲ್‌ ಎನ್‌ಫೀಲ್ಡ್‌ನ ಭಾರತದ ಬಿಸಿನೆಸ್‌ನ ಮುಖ್ಯಸ್ಥ ಶಾಜಿ ಕೋಷಿ ಮತ್ತು ರಾಯಲ್‌ ಎನ್‌ಫೀಲ್ಡ್‌ನ ಅಧ್ಯಕ್ಷ ರುದ್ರತೇಜ್‌ ಸಿಂಗ್ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದರು   

ಬೆಂಗಳೂರು: ರಾಯಲ್ ಎನ್‌ಫೀಲ್ಡ್‌ ಕಂಪನಿಯು ಇಂಟರ್‌ಸೆಪ್ಟರ್‌ ಐಎನ್‌ಟಿ 650 ಮತ್ತು ಕಾಂಟಿನೆಂಟಲ್‌ ಜಿಟಿ650 ಹೆಸರಿನ ಎರಡು ಹೊಸ ಬೈಕ್‌ಗಳನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಕರ್ನಾಟಕ ಅದರಲ್ಲಿಯೂ ಮುಖ್ಯವಾಗಿ ಬೆಂಗಳೂರು ಮಾರುಕಟ್ಟೆ ನಮ್ಮ ಮೊದಲ ಆದ್ಯತೆ. ಹೀಗಾಗಿ ಬೇರೆಲ್ಲಾ ಕಡೆಗಳಿಗಿಂತಲೂ ಕಡಿಮೆ ಎಕ್ಸ್‌ ಷೋರೂಂ ದರ ನೀಡಿದ್ದೇವೆ. ರಾಜ್ಯದಲ್ಲಿ ಇಂಟರ್‌ಸೆಪ್ಟರ್‌ ಐಎನ್‌ಟಿ 650 ಎಕ್ಸ್‌ ಷೋರೂಂ ಬೆಲೆ ₹2.34 ಲಕ್ಷ ರಿಂದ ಆರಂಭವಾಗುತ್ತದೆ. ಬೇರೆ ರಾಜ್ಯಗಳಲ್ಲಿ ಇದು ₹ 2.50 ಲಕ್ಷದಿಂದ ಆರಂಭವಾಗುತ್ತದೆ.ಕಾಂಟಿನೆಂಟಲ್‌ ಜಿಟಿ650 ಎಕ್ಸ್‌ ಷೋರೂಂ ಬೆಲೆ ರಾಜ್ಯದಲ್ಲಿ ₹ 2.49 ಲಕ್ಷದಿಂದ ಆರಂಭವಾದರೆ, ಬೇರೆ ರಾಜ್ಯಗಳಲ್ಲಿ ₹ 2.60 ಲಕ್ಷದಿಂದ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT