ADVERTISEMENT

ದ್ವಿಪಥ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ಧಿ: ನಿತಿನ್ ಗಡ್ಕರಿ

ಪಿಟಿಐ
Published 8 ಮೇ 2025, 15:19 IST
Last Updated 8 ಮೇ 2025, 15:19 IST
<div class="paragraphs"><p>ನಿತಿನ್ ಗಡ್ಕರಿ </p></div>

ನಿತಿನ್ ಗಡ್ಕರಿ

   

–ಪಿಟಿಐ ಚಿತ್ರ

ನವದೆಹಲಿ: ‘ದೇಶದಲ್ಲಿ 30 ಸಾವಿರ ಕಿ.ಮೀ ದೂರದಷ್ಟು ದ್ವಿಪಥ ಹೆದ್ದಾರಿಗಳಿವೆ. ಇವುಗಳನ್ನು ₹10 ಲಕ್ಷ ಕೋಟಿ ವೆಚ್ಚದಡಿ ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ADVERTISEMENT

ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಹೆದ್ದಾರಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದರೆ ದೇಶದ ಆರ್ಥಿಕತೆಯು ಸದೃಢಗೊಳ್ಳಲಿದೆ’ ಎಂದರು.

ನಿರ್ಮಾಣ, ನಿರ್ವಹಣೆ, ವರ್ಗಾವಣೆ (ಬಿಒಟಿ–ಟೋಲ್) ಮಾದರಿಯಡಿ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮಾದರಿಯ ಪರಿಷ್ಕರಣೆ ಕಾರ್ಯವು ಸಚಿವಾಲಯದಿಂದ ನಡೆಯುತ್ತಿದೆ ಎಂದರು.

15 ವರ್ಷದವರೆಗೆ ಸಚಿವಾಲಯವೇ ಟೋಲ್‌ ಸಂಗ್ರಹಿಸಲಿದೆ. ಬಂಡವಾಳ ಹೂಡಿಕೆ ಮಾಡಿದವರಿಗೆ ವಾರ್ಷಿಕ ಲೆಕ್ಕಾಚಾರದಲ್ಲಿ ಹಣ ಪಾವತಿಸಲು ಉದ್ದೇಶಿಸಲಾಗಿದೆ. ಆದರೆ, ಹೆದ್ದಾರಿಗಳ ನಿರ್ವಹಣೆ ಜವಾಬ್ದಾರಿಯು ಗುತ್ತಿಗೆದಾರರದ್ದೇ ಆಗಿರುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.