ADVERTISEMENT

ಗೋ ಡಿಜಿಟ್‌ನಲ್ಲಿ ಆರ್‌ಎಸ್‌ ಫಿಲಂಕ್ರಾಫ್ಟ್‌ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 15:23 IST
Last Updated 21 ಡಿಸೆಂಬರ್ 2021, 15:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಆರಂಭವಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಕಂಪನಿಯಲ್ಲಿ, ಆರ್‌ಎಸ್‌ ಫಿಲಂಕ್ರಾಫ್ಟ್‌ ಕಂಪನಿಯು ಒಟ್ಟು ₹ 5 ಕೋಟಿ ಹಣ ಹೂಡಿಕೆ ಮಾಡಿದೆ. ಗೋ ಡಿಜಿಟ್ ಕಂಪನಿಯು ನಾಲ್ಕು ವರ್ಷಗಳಲ್ಲಿ ತಾನು ಎರಡು ಕೋಟಿಗೂ ಹೆಚ್ಚು ಗ್ರಾಹಕರನ್ನು ಸಂಪಾದಿಸಿರುವುದಾಗಿ ಹೇಳಿಕೊಂಡಿದೆ.

‘ಆರ್‌ಎಸ್‌ ಫಿಲಂಕ್ರಾಫ್ಟ್‌ ಕಂಪನಿಯನ್ನು ನಮ್ಮ ಹೂಡಿಕೆದಾರರನ್ನಾಗಿ ಹೊಂದುವುದಕ್ಕೆ ಸಂತಸ ಆಗುತ್ತಿದೆ. ಕೋವಿಡ್ ಸಾಂಕ್ರಾಮಿಕವು ಪ್ರತಿಯೊಬ್ಬರ ಜೀವನದಲ್ಲಿ ವಿಮೆಯ ಮಹತ್ವವನ್ನು ಹೆಚ್ಚಿಸುತ್ತಿದೆ. ವಿಮಾ ಉತ್ಪನ್ನಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಇರಬೇಕು ಎಂದು ಡಿಜಿಟ್ ಕಂಪನಿ ಹೊಂದಿರುವ ಉದ್ದೇಶದಲ್ಲಿ ಆರ್‌ಎಸ್‌ ಫಿಲಂಕ್ರಾಫ್ಟ್‌ ಕೂಡ ನಂಬಿಕೆ ಇರಿಸಿದೆ’ ಎಂದು ಡಿಜಿಟ್ ಇನ್ಶೂರೆನ್ಸ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ಕಾಮೇಶ್ ಗೋಯಲ್ ಹೇಳಿದ್ದಾರೆ.

ಗೋ ಡಿಜಿಟ್ ಕಂಪನಿಯು ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದೆ. ಇದು ತನ್ನ ಮಾತೃ ಕಂಪನಿಯಾದ ಗೋ ಡಿಜಿಟ್ ಇನ್ಫೊವರ್ಕ್ಸ್‌ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನಿಂದ ₹ 990 ಕೋಟಿ ಬಂಡವಾಳ ಸಂಗ್ರಹಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.