ADVERTISEMENT

India Pak Tensions | ಎಟಿಎಂ ಸೇವೆ ಅಬಾಧಿತ: ಬ್ಯಾಂಕ್‌ಗಳ ಸ್ಪಷ್ಟನೆ

ಪಿಟಿಐ
Published 9 ಮೇ 2025, 16:06 IST
Last Updated 9 ಮೇ 2025, 16:06 IST
ಎಟಿಎಂ ಯಂತ್ರ
ಎಟಿಎಂ ಯಂತ್ರ   

ನವದೆಹಲಿ: ಎರಡು ದೇಶಗಳ ನಡುವಿನ ಸಂಘರ್ಷ ಮುಂದುವರಿಯುವುದರಿಂದ ಮುಂದಿನ ದಿನಗಳಲ್ಲಿ ಎಟಿಎಂ ಕೇಂದ್ರಗಳ ಸೇವೆ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿಯು ಆಧಾರರಹಿತವಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸೇರಿ ಹಲವು ಬ್ಯಾಂಕ್‌ಗಳು ಸ್ಪಷ್ಟನೆ ನೀಡಿವೆ.

ಎಟಿಎಂಗಳಲ್ಲಿ ಹಣ ಸಂಗ್ರಹದ ಕೊರತೆಯಾಗಿಲ್ಲ. ಡಿಜಿಟಲ್‌ ಸೇವೆಯು ಸಾಂಗವಾಗಿ ನಡೆಯುತ್ತಿದೆ. ಹಾಗಾಗಿ, ಗ್ರಾಹಕರು ಅನಗತ್ಯ ಆತಂಕಪಡಬಾರದು ಎಂದು ಬ್ಯಾಂಕ್‌ ಆಫ್‌ ಬರೋಡಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ‘ಎಕ್ಸ್‌’ನಲ್ಲಿ ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT