ADVERTISEMENT

Rupee Dollar Index | ಜಿಗಿತ ಕಂಡ ರೂಪಾಯಿ

ಪಿಟಿಐ
Published 20 ಫೆಬ್ರುವರಿ 2025, 15:33 IST
Last Updated 20 ಫೆಬ್ರುವರಿ 2025, 15:33 IST
<div class="paragraphs"><p>ರೂಪಾಯಿ</p></div>

ರೂಪಾಯಿ

   

ಸಾಂಕೇತಿಕ ಚಿತ್ರ 

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಅಮೆರಿಕದ ಡಾಲರ್‌ ಮೌಲ್ಯ ಕುಸಿತ ಕಂಡಿದ್ದರಿಂದ, ರೂಪಾಯಿ ಚೇತರಿಕೆ ಕಂಡಿದೆ.

ADVERTISEMENT

ರೂಪಾಯಿ ಮೌಲ್ಯವು 33 ಪೈಸೆ ಏರಿಕೆಯಾಗಿದೆ. ಪ್ರತೀ ಡಾಲರ್‌ ಮೌಲ್ಯ ₹86.65 ಆಗಿದೆ. ವಹಿವಾಟಿನ ಆರಂಭದಲ್ಲಿ ₹86.88 ಇದ್ದ ರೂಪಾಯಿ ಮೌಲ್ಯವು ಒಂದು ಸಂದರ್ಭದಲ್ಲಿ ₹86.58ಕ್ಕೆ ತಲುಪಿತ್ತು. ಬಳಿಕ ಏರಿಕೆ ಕಂಡಿತು. 

‘ಕಳೆದ ಐದು ವಹಿವಾಟುಗಳಲ್ಲಿ ಇಳಿಕೆ ಕಂಡಿದ್ದ ರೂಪಾಯಿ ಮೌಲ್ಯವು ಏರಿಕೆಯಾಗಿದೆ. ವಿದೇಶಿ ಬ್ಯಾಂಕ್‌ಗಳು ಡಾಲರ್‌ ಮಾರಾಟಕ್ಕೆ ಮುಂದಾಗಿವೆ. ಇದರಿಂದ ಡಾಲರ್‌ ಮೌಲ್ಯ ಇಳಿದಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ದಿಲೀಪ್ ಪರ್ಮಾರ್ ಹೇಳಿದ್ದಾರೆ. 

ಡಾಲರ್‌ ಎದುರು ಹಲವು ದೇಶಗಳ ಕರೆನ್ಸಿಗಳ ಮೌಲ್ಯ ಕುಸಿದಿರುವ ನಡುವೆಯೇ ರೂಪಾಯಿ ಸದೃಢವಾಗಿದೆ ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಶೇ 0.04ರಷ್ಟು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 76.07 ಡಾಲರ್‌ ಆಗಿದೆ.

ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆಯು ಸದೃಢವಾಗಿದೆ. ಆದರೆ, ಜಾಗತಿಕ ಬಿಕ್ಕಟ್ಟು ಮತ್ತು ಅಮೆರಿಕದ ಸುಂಕ ನೀತಿಯಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಇದರಿಂದ ರೂಪಾಯಿ ಒತ್ತಡಕ್ಕೆ ಸಿಲುಕಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.