ADVERTISEMENT

ರೂ‍ಪಾಯಿ ಮೌಲ್ಯ ಚೇತರಿಕೆ; ಅಮೆರಿಕದ ಡಾಲರ್‌ ಎದುರು 5 ಪೈಸೆ ಏರಿಕೆ

ಪಿಟಿಐ
Published 9 ಜನವರಿ 2025, 13:10 IST
Last Updated 9 ಜನವರಿ 2025, 13:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಸತತವಾಗಿ ಕುಸಿತದ ಹಾದಿ ಹಿಡಿದಿದ್ದ ರೂಪಾಯಿ ಮೌಲ್ಯವು ಗುರುವಾರದ ವಹಿವಾಟಿನಲ್ಲಿ ಚೇತರಿಸಿಕೊಂಡಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು 5 ಪೈಸೆ ಏರಿಕೆಯಾಗಿದೆ. ಪ್ರತೀ ಡಾಲರ್‌ ಮೌಲ್ಯ ₹85.86 ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತುಸು ಇಳಿದಿದೆ. ಇದರ ಬೆನ್ನಲ್ಲೇ ರೂಪಾಯಿ ಮೌಲ್ಯ ಚೇತರಿಕೆ
ಕಂಡಿದೆ.

ADVERTISEMENT

ಡೊನಾಲ್ಡ್‌ ಟ್ರಂಪ್‌ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿದೇಶಿ ಸರಕುಗಳಿಗೆ ಹೆಚ್ಚಿನ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಡಾಲರ್‌ ಮೌಲ್ಯ ಏರಿಕೆಯಾಗುತ್ತಿದೆ. ಅಮೆರಿಕದ ಬಾಂಡ್‌ಗಳ ಗಳಿಕೆಯಲ್ಲಿ ಹೆಚ್ಚಳವಾಗಿದೆ. ಹಾಗಾಗಿ, ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಬಡ್ಡಿದರ ಕಡಿತದ ಬಗ್ಗೆ ಮತ್ತಷ್ಟು ವಿಳಂಬ ಮಾಡುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.