ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸತತ ಮೂರು ದಿನಗಳಿಂದ ಇಳಿಕೆ ಕಂಡಿದ್ದ ರೂಪಾಯಿ ಮೌಲ್ಯವು, ಶುಕ್ರವಾರದ ವಹಿವಾಟಿನಲ್ಲಿ 70 ಪೈಸೆ ಏರಿಕೆಯಾಗಿದೆ.
ಪ್ರತೀ ಡಾಲರ್ ಮೌಲ್ಯ ₹85.25 ಆಗಿದೆ.
ಡಾಲರ್ ಸೂಚ್ಯಂಕ ಇಳಿಕೆಯಾಗಿದೆ. ದೇಶೀಯ ಷೇರು ಸೂಚ್ಯಂಕಗಳು ಏರಿಕೆಯಾಗಿವೆ. ಇದು ರೂಪಾಯಿಗೆ ಬಲ ನೀಡಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಕಚ್ಚಾ ತೈಲದ ದರ ಏರಿಕೆ ಮತ್ತು ವಿದೇಶಿ ಬಂಡವಾಳ ಹೊರಹರಿವಿನ ನಡುವೆಯೂ ರೂಪಾಯಿ ಮೌಲ್ಯ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ಕಳೆದ ಮೂರು ದಿನದ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ 53 ಪೈಸೆ ಇಳಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.