ADVERTISEMENT

ರೂಪಾಯಿ ಮೌಲ್ಯ 53 ಪೈಸೆ ಇಳಿಕೆ

ಪಿಟಿಐ
Published 8 ಜನವರಿ 2019, 18:55 IST
Last Updated 8 ಜನವರಿ 2019, 18:55 IST

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಡಾಲರ್‌ ಎದುರು ‌‌ರೂಪಾಯಿ ಮೌಲ್ಯ 53 ಪೈಸೆ ಕುಸಿತ ಕಂಡಿದೆ. ಇದರಿಂದ ಒಂದು ಡಾಲರ್‌ಗೆ ₹ 70.21ರಂತೆ ವಿನಿಮಯಗೊಂಡಿದೆ.

ಮೂರು ವಹಿವಾಟು ಅವಧಿಯಲ್ಲಿ ರೂಪಾಯಿ ಮೌಲ್ಯದ ಮೊದಲ ಕುಸಿತ ಇದಾಗಿದೆ.

ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಿಂದ ದೇಶದ ಚಾಲ್ತಿ ಖಾತೆ ಕೊರತೆ ಅಂತರ ವೃದ್ಧಿಯಾಗುವ ಆತಂಕ ವ್ಯಕ್ತವಾಗಿದೆ. ಇದು ರೂಪಾಯಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.