ನವದೆಹಲಿ: ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಜೂನ್‌ನಲ್ಲಿ 11 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಜಾಗತಿಕ ವ್ಯಾಪಾರ ವಿಶ್ಲೇಷಕ ಸಂಸ್ಥೆ ಕೆಪ್ಲೆರ್ ಭಾನುವಾರ ತಿಳಿಸಿದೆ.
ಭಾರತ ಪ್ರತಿ ದಿನ 20.8 ಲಕ್ಷ ಬ್ಯಾರೆಲ್‌ನಷ್ಟು ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ಇರಾಕ್‌ನಿಂದ 8.93 ಲಕ್ಷ ಬ್ಯಾರೆಲ್, ಸೌದಿ ಅರೇಬಿಯಾ 5.81 ಲಕ್ಷ ಬ್ಯಾರೆಲ್, ಯುಎಇ 4.90 ಲಕ್ಷ ಬ್ಯಾರೆಲ್ ಮತ್ತು ಅಮೆರಿಕದಿಂದ ಪ್ರತಿ ದಿನ 3.03 ಲಕ್ಷ ಬ್ಯಾರೆಲ್ ಆಮದು ಮಾಡಿಕೊಂಡಿದೆ.
ರಷ್ಯಾದಿಂದ ಜೂನ್‌ನಲ್ಲಿ ಆಮದು ಮಾಡಿಕೊಂಡ ಇಂಧನದ ಮೌಲ್ಯ ₹45,170 ಕೋಟಿ. ಈ ಪೈಕಿ ಕಚ್ಚಾ ತೈಲ ಆಮದು ಪಾಲು ಶೇ 80ರಷ್ಟಿದ್ದು, ₹36,136 ಕೋಟಿಯಾಗಿದೆ.
ಪ್ರಸಕ್ತ ವರ್ಷದ ಜನವರಿಯಿಂದ ಜೂನ್‌ವರೆಗೆ ರಷ್ಯಾ ದೇಶವು, ಭಾರತದ ಅಗ್ರ ಕಚ್ಚಾ ತೈಲ ಪೂರೈಕೆ ರಾಷ್ಟ್ರವಾಗಿದೆ. ಆಮದು ಪ್ರಮಾಣ ಪ್ರತಿ ದಿನ 16.7 ಲಕ್ಷ ಬ್ಯಾರೆಲ್ ಆಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.